ವಾಷಿಂಗ್ಟನ್: ಫ್ರೆಂಡ್ ಆಫ್ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಈಗ ಭಾರತ ಹಾಗೂ ಭಾರತೀಯರ ಪಾಲಿಗೆ ಮಾರಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.
ಈಗಾಗಲೇ ತೆರಿಗೆ ವಿವಾದ, ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ ನಿಲ್ಲಿಸಿದ್ದು ನಾನೇ ಎಂದು ಸತತ 24 ಬಾರಿ ಹೇಳಿ ಮೋದಿ ಸರ್ಕಾರದ ಏಕಾಏಕಿ ನಿರ್ಣಯದ ವಿರುದ್ಧ ಅನುಮಾನವನ್ನು ಸೃಷ್ಟಿಸಿದ್ದಾರೆ.
ಇದರ ಬೆನ್ನಲ್ಲೇ ಈಗ ಭಾರತೀಯ ಟೆಕ್ಕಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಎಂದು ಅಮೇರಿಕಾದ ಮೈಕ್ರೋಸಾಫ್ಟ್ ಕಂಪನಿಗಳಿಗೆ ಸೂಚಿಸಿದ್ದಾರೆ.
ವಿದೇಶಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಆ ಅವಕಾಶವನ್ನು ಅಮೆರಿಕನ್ನರಿಗೆ ನೀಡುವಂತೆ ಆದೇಶಿಸಿದ್ದಾರೆ.
ಕಾರ್ಯಕ್ರಮವೊಂದಲ್ಲಿ ಟೆಕ್ ಕಂಪನಿಗಳ ಜಾಗತಿಕವಾದದ ಮನಸ್ಥಿತಿ ಟೀಕಿಸಿರುವ ಟ್ರಂಪ್, ಇದರಿಂದ ಅಮೆರಿಕನ್ನರನ್ನು ನಿರ್ಲಕ್ಷಿಸಲಾಗುತ್ತಿದೆ. ಇಲ್ಲಿರುವ ಸ್ವಾತಂತ್ರ್ಯ ಬಳಸಿ, ಚೀನಾದಲ್ಲಿ ಕಂಪನಿ ಸ್ಥಾಪಿಸಿ, ಭಾರತೀಯನ್ನು ನೇಮಿಸಿ, ಐರ್ಲೆಂಡ್‌ನಲ್ಲಿ ಲಾಭವನ್ನು ಸಂಗ್ರಹಿಸಿಟ್ಟು, ದೇಶದ ಹೊರಗೆ ಹೂಡಿಕೆ ಮಾಡಲಾಗುತ್ತಿದೆ.
ಇದು ಟ್ರಂಪ್ ಆಡಳಿತದಲ್ಲಿ ನಡೆಯದು. ಎಐಸ್ಪರ್ಧೆಯಲ್ಲಿ ಗೆಲ್ಲುವುದಕ್ಕೆ ದೇಶಭಕ್ತಿ ಮತ್ತು ರಾಷ್ಟ್ರೀಯ ನಿಷ್ಠೆಯ ಹೊಸ ಮನೋಭಾವ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜತೆಗೆ, ‘ಕಂಪನಿಗಳನ್ನು ಅಮೆರಿಕದಲ್ಲೇ ಸ್ಥಾಪಿಸಿ, ಇಲ್ಲಿನವರಿಗೇ ಉದ್ಯೋಗ ಒದಗಿಸಿ. ನಾವು ನಿಮ್ಮಿಂದ ಬಯಸುವುದಿಷ್ಟೇ’ ಎಂದಿದ್ದಾರೆ.