ಧರ್ಮಸ್ಥಳ (Dharmasthala): ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ.31 ರಂದು 6ನೇ ಗುರುತಿನ ಎಸ್‌ಐಟಿ (SIT) ನಡೆಸಿದ ಉತ್ಖನನದಲ್ಲಿ ಶವದ ಅವಶೇಷ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಕೆಲ ಮೂಳೆಗಳು ಪತ್ತೆಯಾಗಿದ್ದು, ವಿಧಿ ವಿಜ್ಞಾನ ಅಧಿಕಾರಿಗಳು ಅದನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಿದ್ದಾರೆ.
ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮೃತದೇಹಗಳನ್ನು ಬೆದರಿಸಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿರುವ ಅನಾಮಧೇಯ ವ್ಯಕ್ತಿಯೊಂದಿಗೆ ಎಸ್.ಐ.ಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸತತ 3 ದಿನಗಳಿಂದ ನಿರಂತರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಇದೀಗ ಮೃತದೇಹದ ಅವಶೇಷ ಪತ್ತೆಯಾಗಿದೆ.
ಈಗ ಪತ್ತೆಯಾಗಿರುವ ಮಾನವ ಅವಶೇಷ ಕೊಲೆನಾ, ಆತ್ಮಹತ್ಯೆಯಾ, ಅಸಹಜ ಸಾವಿನದಾ..? ಎಂಬುದು ತನಿಖೆ ಬಳಿಕ ತಿಳಿದು ಬರಬೇಕಿದೆ.
ಇದೀಗ 6ನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ಮುಕ್ತಾಯಗೊಂಡಿದೆ ಎಂದು ತಿಳಿದು ಬಂದಿದ್ದು, 7ನೇ ಪಾಯಿಂಟ್‌ನಲ್ಲಿ ಉತ್ಖನನ ಆರಂಭವಾಗಿದೆ ಎಂದು ವರದಿಯಾಗಿದೆ.