ದೆಹಲಿ: ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಬಿಜೆಪಿಯವರು ಪ್ರಜ್ವಲ್ ರೇವಣ್ಣ ಪ್ರಕರಣದ ಉತ್ತರ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಅವರು ಸುದ್ದಿಗಾರರು ಜನಪ್ರತಿನಿಧಿಗಳ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಪನ ಕುರಿತು ಕೇಳಿದ ಪ್ರಶ್ನೆಗೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕಿನ್ನೂ ಸುಮ್ಮನಿದ್ದಾರೆ? ಮಿತ್ರ ಪಕ್ಷ ಅಲ್ವಾ ಮಾತಾಡಲಿ ಅಂತ ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣನ ಸಂಬಂಧಿಯೊಬ್ಬರು ಕೇಂದ್ರದಲ್ಲಿ ಸಚಿವರಾಗಿದ್ದಾರಲ್ಲ? ಅವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಇವರೆಲ್ಲರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೇಕು.
ಬಿಜೆಪಿಯವರು ಮಾತಾಡಲಿ ಈಗ, ಭೇಟಿ ಬಚಾವ್, ಭೇಟಿ ಪಡಾವ್ ಎನ್ನುವ ಬಿಜೆಪಿಯವರು ಪ್ರಜ್ವಲ್ ಅಥವಾ ಸೂರಜ್ ರೇವಣ್ಣ ಮಾಡಿದ್ದು ತಪ್ಪು, ಮುನಿರತ್ನಂ ನಾಯ್ಡು ಮಾಡಿದ್ದು ತಪ್ಪು ಅಂತ ಒಬ್ಬ ಬಿಜೆಪಿ, ಜೆಡಿಎಸ್ ನಾಯಕನಾದರೂ ಹೇಳಿದ್ದಾನಾ?
ಹೀನಾಯ ಕೃತ್ಯದ ಬಗ್ಗೆ ನಾಚಿಕೆ ಪಡಬೇಕು. ರಾಜಕೀಯ, ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯಬೇಕು. ಒಂದಲ್ಲ, ಎರಡಲ್ಲ, ನನಗೆ ತಿಳಿದಂತೆ ಇದು ಒಂದು ಪ್ರಕರಣದ ತೀರ್ಪು, ಇನ್ನೂ ಮೂರ್ನಾಲ್ಕು ಪ್ರಕರಣ ಬಾಕಿ ಇದೆ. ಬಿಜೆಪಿ ಮಿತ್ರ ಪಕ್ಷ ಅಲ್ವಾ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮುಜುಗರ ಆಗಿದೆ ಎಂದು ಮೈತ್ರಿಯಿಂದ ಹೊರಬರಲಿ ಎಂದು ಹೇಳಲಿ ಎಂದು ಪ್ರಶ್ನಿಸಿದರು.