ದೊಡ್ಡಬಳ್ಳಾಪುರ; ಕರ್ನಾಟಕದಲ್ಲಿ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ರೈತರು ರಸಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ ಎಂಬ ಕರ್ನಾಟಕ ಬಿಜೆಪಿ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ಸಚಿವ ವಿ.ಸೋಮಣ್ಣ (V. Somanna) ತಣ್ಣೀರು ಸುರಿದಿದ್ದಾರೆ.
ಹೌದು ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಕಾರ್ಯಕ್ರಮದ ಚಾಲನೆ ನೀಡಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ಸಚಿವ ವಿ ಸೋಮಣ್ಣ ಈ ಕುರಿತಂತೆ ಮಾತನಾಡಿದರು.
ರೈತರಿಗೆ ಯೂರಿಯ ಗೊಬ್ಬರ ಕೊರತೆಯನ್ನು ನಿವಾರಿಸಿದ್ದೇವೆ 6.52 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯತೆಯಿದ್ದು, ರಾಜ್ಯಕ್ಕೆ 15,825 ಸಾವಿರ ಮೆಟ್ರಿಕ್ ಟನ್ ಲಭ್ಯವಿದ್ದು, ಯೂರಿಯಾ ಮಾರಾಟ ಬೇಡಿಕೆಗಿಂದ ಹೆಚ್ಚಿದೆ ಎಂದರು.
ಇನ್ನೂ ಕೊರತೆ ಇದ್ದರೆ ಸರ್ಕಾರಕ್ಕೆ ತಿಳಿಸಬೇಕು. ನಮ್ಮ ಭಾರತ ಸರ್ಕಾರದ ಕಡೆಯಿಂದ ಉತ್ತಮ ಕೆಲಸಗಳಾಗಿವೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿದು ಕೆಲಸ ಮಾಡಬೇಕು ಎಂದರು.