ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದು ಸ್ವಯಂ ಘೋಷಿಸಿಕೊಂಡಿರುವ ದೇಶ ಅಮೇರಿಕಾ (America), ಡೋನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾದ ಬಳಿಕವಂತೂ ಒಂದಿಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ.
ಭಾರತ – ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನು ಎಂದು 32 ಬಾರಿ ಕೊಚ್ಚಿಕೊಂಡಿರುವುದು, ಭಾರತ-ರಷ್ಯಾ (India – Russia) ತೈಲ ವ್ಯಾಪಾರ ಸಂಬಂಧವವನ್ನು ಹೇಗಾದರೂ ಮಾಡಿ ತಡೆಯಬೇಕು, ತಾನು ನುಡಿದಂತೆ ಭಾರತವನ್ನು ಕುಣಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಾತಾಡುತ್ತಲೇ ಇದ್ದಾರೆ.
ಇದರ ಮಧ್ಯೆ ಡೊನಾಲ್ಡ್ ಟ್ರಂಪ್ ಹೇಳಿಕೆಯೊಂದು ವಿಶ್ವದಾದ್ಯಂತ ಖುದ್ದು ಅಮೆರಿಕವನ್ನು ಮುಜುಗರಕ್ಕೀಡು ಮಾಡಿದೆ.
ಪ್ರಂಚದ ಎಲ್ಲಾ ದೇಶಗಳಿಗೂ ದೊಡ್ಡ ಎಂದು ಮೂಗು ತೂರಿಸುವ ಅಮೇರಿಕಾ ಅಧ್ಯಕ್ಷ ಟ್ರಂಪ್ ದೊಡ್ಡಣ್ಣನ ತರಹ ಅಲ್ಲ ದಡ್ಡಣ್ಣನ ತರಹ ಆಡುತ್ತಿದ್ದಾರೆ.
ಏನಾದ್ರೂ ಮಾಡಿ ನೊಬೆಲ್ ಶಾಂತಿ ಪುರಸ್ಕಾರ ಕೊಡ್ಲಿ ಅಂತ ಪದೇ ಪದೇ ಕನವರಿಸುತ್ತಿದ್ದಾರೆ. ಇದರ ಮಧ್ಯೆ ಬಲಿಷ್ಠ ಭಾರತವನ್ನು ಎದುರು ಹಾಕಿಕೊಂಡು ಅಮೆರಿಕಕ್ಕೆ ಮುಜುಗರ ತರುತ್ತಿದ್ದಾರೆ. ಆದರೆ ಭಾರತದ ಪತ್ರಕರ್ತರೊಬ್ಬರ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಾಗದೇ ಪೇಚಿಗೆ ಸಿಲುಕಿದ್ದು, ವಿಶ್ವದ್ದೆಲ್ಲಾ ಮಾತಾಡುವ ಟ್ರಂಪ್ಗೆ ತನ್ನ ದೇಶದಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲ ಎಂದು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.
ಹೌದು ರಷ್ಯಾದ ತೈಲ ಆಮದು ಮಾಡಿಕೊಳ್ಳುತ್ತಿದೆ ಅಂತ ಭಾರತದ ಮೇಲೆ ಅಮೆರಿಕ ಸುಂಕದ ಬೆದರಿಕೆ ಹಾಕುತ್ತಿದೆ. ಇದರ ಮಧ್ಯೆ ಭಾರತದ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಮಾಸ್ಕೋ ಜೊತೆಗಿನ ಯುರೇನಿಯಂ ಮತ್ತು ರಸಗೊಬ್ಬರ ವ್ಯಾಪಾರದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ.
#WATCH | Responding to ANI's question on US imports of Russian Uranium, chemical fertilisers while criticising their (Indian) energy imports', US President Donald Trump says, "I don't know anything about it. I have to check…"
— ANI (@ANI) August 5, 2025
(Source: US Network Pool via Reuters) pic.twitter.com/OOejcaGz2t
ಅಮೆರಿಕವು ರಷ್ಯಾದಿಂದ ಯುರೇನಿಯಂ ಮತ್ತು ರಸಗೊಬ್ಬರ ಆಮದು ಮಾಡಿಕೊಳ್ಳುತ್ತಿದೆ. ಅದರ ಬಗ್ಗೆ ಏನಂತೀರಿ ಎಂದು ರಾಷ್ಟ್ರೀಯ ಸುದ್ದಿವಾಹಿನಿ ANI ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು. ‘ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಈ ಕುರಿತು ಪರಿಶೀಲನೆ ನಡೆಸುತ್ತೇನೆ’ ಎಂದು ಟ್ರಂಪ್ ಹೇಳಿದ್ದು ನೆಟ್ಟಿಗರ ಲೇವಡಿಗೆ ಕಾರಣವಾಗಿದೆ.
ಟ್ರಂಪ್‌ಗೆ ತಿರುಗೇಟು ನೀಡಲು ಮೋದಿ ವಿಫಲ: ರಾಹುಲ್ ಗಾಂಧಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೆರಿಗೆ ಸಮರದ ವಿರುದ್ಧ ತಕ್ಕ ಪ್ರತ್ಯುತ್ತರ ನೀಡಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತಾಡಿದ ಅವರು, ಗೌತಮ್ ಅದಾನಿ ವಿರುದ್ಧ ನಡೆಯುತ್ತಿರುವ ಯುಎಸ್ ತನಿಖೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಟ್ರಂಪ್ ಬೆದರಿಕೆ ಹಾಕುತ್ತಿದ್ದರೂ ಅವರ ವಿರುದ್ಧ ಮಾತಾಡೋಕೆ ಹಾಗೂ ಪ್ರತ್ಯುತ್ತರ ನೀಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತವು ಉತ್ತಮ ವ್ಯಾಪಾರ ಪಾಲುದಾರನಲ್ಲ ಎಂದು ಟ್ರಂಪ್ ಹೇಳಿದ್ದಾರೆ. ರಷ್ಯಾದ ತೈಲವನ್ನು ಖರೀದಿಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಸುಂಕವನ್ನು 25% ಹೆಚ್ಚಿಸುತ್ತೇನೆ ಎಂದು ಹೇಳಿದ್ದರೂ ಮೋದಿ ಯಾವ ಪ್ರತಿಕ್ರಿಯೆ ನೀಡದೆ ಜಾಣ ಮೌನ ವಹಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಿರೋದು ಅನೇಕ ಅನುಮಾನ ಹಾಗೂ ಅವಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.