ದೊಡ್ಡಬಳ್ಳಾಪುರ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗೃಹಿಣಿಯೋರ್ವರು ಒಂದುವರೆ ವರ್ಷದ ಮಗುವಿನ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೃತ ದುರ್ದೈವಿಯನ್ನು ಶಾಮಲ (26 ವರ್ಷ) ಎಂದು ಗುರುತಿಸಲಾಗಿದೆ.
ತಿಪ್ಪೂರು ಗ್ರಾಮದವರಾದ ಶಾಮಲ ಅವರನ್ನು ಕೆಸ್ತೂರು ಗ್ರಾಮದ ಮಧುಸೂದನ್ ಅವರಿಗೆ 5 ವರ್ಷಗಳ ಹಿಂದೆ ಮದುವೆ ಮಾಡಲಾಗಿದ್ದು, ಒಂದು ಗಂಡು, ಒಂದು ಹೆಣ್ಣು ಮಕ್ಕಳಿರುತ್ತದೆ.
ನಿನ್ನೆ ಮಧ್ಯಾಹ್ನ 3.30 ರ ಸಮಯದಲ್ಲಿ ಮನೆಯಲ್ಲಿ ಕೆಲಸ ಮಾಡುವ ವಿಚಾರ ಹಾಗೂ ಬೇರೆ ಮನೆ ಮಾಡು ವಿಚಾರವಾಗಿ ಅತ್ತ- ಸೊಸೆ ನಡುವೆ ಜಗಳವಾಗಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ಶಾಮಲ ಅವರು ತನ್ನ ಒಂದುವರೆ ವರ್ಷದ ಮಗುವಿನೊಂದಿಗೆ ರೂಮಿಗೆ ತೆರಳಿದವರು, ಮಂಚದ ಮೇಲೆ ಚೇರ್ ಹಾಕಿ, ಶೀಟಿನ ಹ್ಯಾಂಗಲ್ಗೆ ಬಟ್ಟೆ ಒಣಗಿಸುವ ಪ್ಲಾಸ್ಟಿಕ್ ವೈರ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಮಗು ಅಳವುದನ್ನು ನೋಡಿದ ಅತ್ತೆ ಕಿಟಕಿಯಲ್ಲಿ ನೋಡಿದಾಗ ಶಾಮಲ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಎಲ್ಲರನ್ನೂ ಕೂಗಿ ,ಬಾಗಿಲು ತೆರೆದು ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನಪ್ಪಿದ್ದಾರೆ ಎಂದು ಗಂಡನ ಕಡೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನೂ ಮೃತ ಶಾಮಲ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಮಗಳ ಆತ್ಮಹತ್ಯೆ ಕಾರಣ ಎಂದು ದೂರಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ಮೃತ ಶಾಮಲ ಪೋಷಕರು, ಮದುವೆಯಾದ ಸುಮಾರು 1 ವರ್ಷಗಳವರೆಗೆ ನಮ್ಮ ಮಗಳನ್ನು (ಶಾಮಲ) ಚೆನ್ನಾಗಿ ನೋಡಿಕೊಂಡು ನಂತರದಲ್ಲಿ ಆಕೆಯನ್ನು ನಮ್ಮ ಮನೆಗೆ ಕಳುಹಿಸುತ್ತಿರಲಿಲ್ಲ. ಆಗಾಗ ನಮ್ಮ ಮಗಳು ನನಗೆ ಪೋನ್ ಮಾಡಿ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ, ಅತ್ತೆ ಮಾವ ನಾದಿನಿಯರು ನಿನ್ನ ತವರು ಮನೆಯವರು ಬಡವರು ಮದುವೆ ಸರಿಯಾಗಿ ಮಾಡಿಕೊಟ್ಟಿಲ್ಲ, ದಿನ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆಂದು ತಿಳಿಸುತ್ತಿದ್ದಳು.
ತನ್ನ ಗಂಡನ ಮನೆಯಲ್ಲಿ ಗಲಾಟೆ ಯಾದರೆ ನನ್ನ ಆಳಿಯಾ ನನ್ನ ಮಗಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದು ಬಿಟ್ಟು ಹೋಗುತ್ತಿದ್ದನು. ಸ್ವಲ್ಪ ದಿನಗಳ ನಂತರ ನನ್ನ ಮಗಳಿಗೆ ಸಮಾಧಾನ ಮಾಡಿ ಕರೆದುಕೊಂಡು ಹೋಗುತ್ತಿದ್ದನು. ಈ ರೀತಿ ನನ್ನ ಮಗಳು ಸುಮಾರು 2-3 ಬಾರಿ ಗಲಾಟೆ ಮಾಡಿದಾಗ ನಮ್ಮ ಮನೆಗೆ ಬಂದಿರುತ್ತಾಳೆ.
ಆಗಸ್ಟ್ 11ರಂದು ನಮ್ಮ ಅಳಿಯ ಮಧುಸೂದನ್ ನನ್ನ ಮಗಳನ್ನು ಕರೆದುಕೊಂಡು ಬಂದು ನಮ್ಮ ಮನೆಗೆ ಬಿಟ್ಟು ಹೋಗಿರುತ್ತಾನೆ, ನಂತರ ನನ್ನ ಮಗಳನ್ನು ವಿಚಾರಿಸಲಾಗಿ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ, ಅತ್ತೆ, ಮಾವ ಹಾಗೂ ನಾದಿನಿಯರು ನಿನಗೆ ಸರಿಯಾಗಿ ಕೆಲಸ ಮಾಡುಲು ಬರುವುದಿಲ್ಲ. ನೀನು ದಡ್ಡಿ ನಿನ್ನ ಮದುವೆ ಸಮಯದಲ್ಲಿ ನಿನ್ನ ತವರು ಮನೆಯವರು ಯಾವುದೇ ವರದಕ್ಷಿಣೆ ನೀಡಿರುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ನೀನು ನಿನ್ನ ತವರು ಮನೆಯಿಂದ ಒಡವೆಗಳನ್ನು ತೆಗೆದುಕೊಂಡು ಬಾರದೇ ಇದ್ದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ನನ್ನನು ನಿಮ್ಮ ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾರೆಂದು ತಿಳಿಸಿರುತ್ತಾಳೆ.
ಆಗಸ್ಟ್ 13 ರಂದು ನಮ್ಮ ಆಳಿಯ ನಮ್ಮ ಮನೆಗೆ ಬಂದು ಇನ್ನೂ ಮುಂದೆ ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಹಾಗೂ ನಮ್ಮ ಮನೆಯಲ್ಲಿ ನಮ್ಮ ತಂದೆ, ತಾಯಿ ಜೊತೆ ಹೊಂದಾಣಿಕೆ ಆಗದಿದ್ದರೆ ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತೇನೆಂದು ಹೇಳಿ, ನನ್ನ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ.
ನಮ್ಮ ಅಳಿಯ ನಮ್ಮ ಮನೆಗೆ ಬಂದಾಗ ಆತನಿಗೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿ ಹೇಳಿರುತ್ತೇವೆ. ಹಾಗೂ ನಿಮ್ಮ ಮನೆಯಲ್ಲಿ, ನಿಮ್ಮ ತಾಯಿ ನನ್ನ ಮಗಳಿಗೆ ಸರಿಯಾಗಿ ಊಟ ತಿಂಡಿ ಕೊಡದೆ ಹಿಂಸೆ ನೀಡಿರುತ್ತಾರೆ, ಆದ್ದರಿಂದ ತಿಂಡಿ ಕೊಡದೆ ಹಿಂಸೆ ನೀಡಿರುತ್ತಾರೆ, ಆದ್ದರಿಂದ ಈ ವಿಚಾರವಾಗಿ ನಾವು ಆಗಸ್ಟ್ 15 ರಂದು ನ್ಯಾಯ ಪಂಚಾಯಿತಿ ಮಾಡಲು ನಿಮ್ಮ ಮನೆಗೆ ಬರುತ್ತೇವೆಂದು ಹೇಳಿ ನನ್ನ ಮಗಳನ್ನು ನಮ್ಮ ಆಳಿಯನ ಜೊತೆಯಲ್ಲಿ ಕಳುಹಿಸಿಕೊಟ್ಟಿರುತ್ತೇವೆ.
ಆದರೆ ಆಗಸ್ಟ್ 15ರ ಸಂಜೆ ಸುಮಾರು 04:00 ಗಂಟೆಗೆ ಕೆಸ್ತೂರು ಗ್ರಾಮದಿಂದ ನನ್ನ ಆಳಿಯನಾದ ಮಧುಸೂದನ್, ನನ್ನ ತಮ್ಮ ವೆಂಕಟೇಶಗೆ ಫೋನ್ ಮಾಡಿ ಬೇಗನೆ ನಮ್ಮ ಮನೆಗೆ ಬಾ ಎಂದು ತಿಳಿಸಿರುತ್ತಾನೆ. ನಾವು ಯಾಕೆ ಎಂದು ಕಳೆದರು ಸಹ ಏನು ವಿಷಯ ತಿಳಿಸಿರುವುದಿಲ್ಲ, ಆದ್ದರಿಂದ ನಾವು ಕೆಸ್ತೂರು ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಮಗಳು ಹೆಣವಾಗಿ ಬಿದ್ದಿರುತ್ತಾಳೆ. ಅಲ್ಲಿ, ವಿಚಾರಣೆ ಮಾಡಿದಾಗ ನನ್ನ ಮಗಳು ಶಾಮಲ ಮನೆಯ ಮೇಲಿರುವ ರೂಮಿನಲಿ, ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡು ತರಹ ಬಿದ್ದಿರುತ್ತಾಳೆ.
ಆದ್ದರಿಂದ ನನ್ನ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ವರದಕ್ಷಿಣೆ ಕಿರುಕುಳ ನೀಡಿ, ನನ್ನ ಮಗಳ ಸಾವಿಗೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ನೀಡಿದ್ದಾರೆಂದು ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.