ದೊಡ್ಡಬಳ್ಳಾಪುರ: ಇಂದು ಬೆಳಗ್ಗೆ ವರದಿಯಾಗಿದ್ದ ಹಿಟ್ ಅಂಡ್ ರನ್ (Hit and run) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವ್ಯಕ್ತಿಯ ಹತ್ಯೆ ನಡೆದಿರುವ ಅನುಮಾನ (Murder) ಪೊಲೀಸರಿಗೆ ಕಂಡು ಬಂದಿದೆ.
ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ನಗರದ ಹೊರವಲಯದಲ್ಲಿರುವ ರೈಲ್ವೇ ಸ್ಟೇಷನ್ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು.
ಘಟನೆಯಲ್ಲಿ ಹಿಂದೂಪುರ ಮೂಲದ ಬಾಲು (40 ವರ್ಷ) ಎಂದು ಗುರುತಿಸಲಾಗಿತ್ತು. ಈತ ಕೂಲಿ ಕಾರ್ಮಿಕನಾಗಿದ್ದು ಕೆಲಸಕ್ಕೆಂದು ಬಂದಿದ್ದ ಎನ್ನಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಕುರಿತಂತೆ ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಪ್ರಕರಣದಲ್ಲಿ ಅನುಮಾನ ಕಂಡು ಬಂದಿದ್ದು, ಇದು ವಾಹನದಿಂದ ಉಂಟಾದ ಹಿಟ್ ಅಂಡ್ ರನ್ ಪ್ರಕರಣವಲ್ಲ, ಹತ್ಯೆ ನಡೆದಿರಬಹುದು ಎಂಬ ಶಂಕೆ ಕೇಳಿ ಬಂದಿದೆ.
ಇನ್ನೂ ಈ ಕುರಿತಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.