ದೇವನಹಳ್ಳಿ: ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ಈ ಬಗ್ಗೆ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಾದ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾಗಿದೆ ಅಂತ ಕೇಳ್ತಿದ್ರು. ಹೀಗಾಗಿ ನಾನು 80 ಕ್ಷೇತ್ರಗಳಲ್ಲಿ ಸುತ್ತಾಡಿ ಅವರ ಜವಬ್ದಾರಿಯನ್ನ ನಾನು ಹೊರುತ್ತಿದ್ದೇನೆ. ಪ್ರತಿನಿತ್ಯ ನಾನು ನನ್ನ ಆಯಸ್ಸು ನನ್ನ ತಂದೆಗೆ ಕೊಡಬೇಕು ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದೀನಿ. ನಾನು ಕೇವಲ ಮಗನಾಗಿ ಈ ಮಾತನ್ನ ಹೇಳ್ತಿಲ್ಲ.
ಕುಮಾರಣ್ಣ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.ಮತ್ತೆ ಅವರು ಚೇತರಿಕೆ ಕಾಣುತ್ತಿದ್ದಾರೆ. ಶೀಘ್ರದಲ್ಲೆ ಸಂಪೂರ್ಣ ಗುಣಮುಖರಾಗುತ್ತಾರೆ. ದೇವೆಗೌಡರು, ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಅನ್ನೋ ನಂಬಿಕೆ ಇದೆ ಎಂದು ತಿಳಿಸಿದರು.
ಯಾರೋ ಕಟ್ಟಿದ ಗೂಡಲ್ಲಿ ಸಿದ್ರಾಮಣ್ಣ ಅಧಿಕಾರ ಮಾಡ್ತಿದ್ದಾರೆ
ಸಿದ್ರಾಮಣ್ಣ ನಿಮ್ಮ ಮೇಲೆ ಗೌರವ ಇದೆ. ಯಾರೋ ಕಟ್ಟಿದ ಗೂಡಲ್ಲಿ ಕೂತು ಅಧಿಕಾರ ಮಾಡುತ್ತಿದ್ದೀರಾ ನೀವು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಅಧಿವೇಶನದ ಕೊನೆ ದಿನ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದಕ್ಕೆ ನಾಡಿನ ಜನ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ಕೊಡ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ನನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡ್ತಾರೆ ಎಂದು ಕಿಡಿಕಾರಿದರು.
ರಾಜಕಾರಣದಲ್ಲಿ ಸಿಎಂ ಸಿದ್ರಾಮಯ್ಯ ಅವರು ಯಾವ ಪಕ್ಷದಿಂದ ಬೆಳೆದು ಬಂದ್ರು ಆ ದಾರಿಯನ್ನ ಮರೆತ್ತಿದ್ದಾರೆ. ಅಂದಿನ ಕಾಲದಲ್ಲಿ ದೊಡ್ಡ ದೊಡ್ಡ ನಾಯಕರು ಜೆಡಿಎಸ್ ಪಕ್ಷದಲ್ಲಿದ್ರು ಅಂದು ದೇವೇಗೌಡರು ಅವರನ್ನ ಹಣಕಾಸಿನ ಸಚಿವರಾಗಿ ಮಾಡ್ತಾರೆ. ಅದ್ರೆ ಇಂದು ಜೆಡಿಎಸ್ ಪಕ್ಷವನ್ನೇ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.
2018ರ ಚುನಾವಣೆ ಫಲಿತಾಂಶದ ಬಳಿಕ ಪಂಚೆ, ಜುಬ್ಬಾ ಹಾಕಿ ಕೈ ಕಟ್ಟಿಕಂಡು ಸಿದ್ರಾಮಯ್ಯ ಅವರು ನಮ್ಮ ಜತೆ ಸರ್ಕಾರ ಮಾಡಿ ಅಂತ ದೇವೇಗೌಡರು ಮನೆ ಬಾಗಿಲಿಗೆ ಬಂದಿದ್ರು. ದೇವೇಗೌಡರು ಕುಮಾರಣ್ಣ ನಿಮ್ಮ ಮನೆ ಬಾಗಿಲಿಗೆ ಬಂದಿದ್ರಾ.? ಯಾರ್ ಬಂದಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಣ್ಣ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ 2018ರಲ್ಲಿ ಇದೇ ಸಿದ್ದರಾಮಯ್ಯ ಅವರು ಹೇಳಿದ್ರು. ಆಗ ಕುಮಾರಣ್ಣ ಮುಖ್ಯಮಂತ್ರಿ ಯಾದರು, ಸಿದ್ರಾಮಣ್ಣ ಹೇಳಿದ್ದೆಲ್ಲಾ ಉಲ್ಟಾನೆ ಆಗಿದೆ. ಯಾರೋ ಕಟ್ಟಿದ ಗೂಡಲ್ಲಿ ವಾಸ ಮಾಡುತ್ತಿರುವುದು ನೀವು. ನಮಗೆ ಸವಾಲು ಎಸೆದಿದ್ದೀರಿ ಆ ಸವಾಲನ್ನ ಸ್ಪೀಕರ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಕಾಂಗ್ರೆಸ್ ನವರೇ ದಯಮಾಡಿ ಎಚ್ಚರಿಕೆಯಿಂದ ಇರಿ. ಸಿದ್ದರಾಮಣ್ಣವರ ರಾಜಕಾರಣದ ಇತಿಹಾಸ ನಿಮಗೆಲ್ಲರಿಗೂ ಗೊತ್ತಿದೆ. ಅವರು ಉಂಡ ಮನೆಗೆ ದ್ರೋಹ ಬಗೆಯುತ್ತಾರೆ. ನೀವೇನಾದ್ರೂ ಮುಖ್ಯಮಂತ್ರಿ ಕುರ್ಚಿ ಸ್ವಲ್ಪ ಅಲುಗಾಡುತ್ತಿದೆ ಅಂದರೆ ಅಲ್ಲಾಡಿಸಿ ಮಲಗ್ಸಿ ಸಿದ್ರಾಮಯ್ಯ ಹೊರಟು ಹೋಗ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು
ಸಿದ್ರಾಮಣ್ಣ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿರುವವರೆಗೂ ಕಾಂಗ್ರೆಸ್ ಪಕ್ಷ . ಕಾಂಗ್ರೆಸ್ಸಲ್ಲಿರುವ ಮಂತ್ರಿಗಳು ವಾಸ್ತವಂಶ ಮಾತನಾಡುವ ಹಾಗೆ ಇಲ್ಲ. ವಾಸ್ತವಂಶ ಏನಾದರೂ ಮಾತಾಡಿದರೆ ಪಕ್ಷದಿಂದಲೇ ವಜಾ ಮಾಡುತ್ತಾರೆ.ಕಾಂಗ್ರೆಸ್ ಪಕ್ಷದ ಡೆಮಾಕ್ರಸಿ ಸಿಸ್ಟಮ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಧರ್ಮಸ್ಥಳ ಎಸ್ ಐ ಟಿ ತನಿಖೆ ವಿಚಾರಕ್ಕೆ ಮಾತನಾಡಿದ ಅವರು, ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ವಿಶ್ವ ವ್ಯಾಪಿ ಭಕ್ತರಿದ್ದಾರೆ ಅದರಲ್ಲಿ ನಾನೂ ಒಬ್ಬ. ಇತ್ತೀಚೆಗೆ ಮಾಸ್ಕ್ ಮ್ಯಾನ್ ಹೇಳಿದ ಅಂತ ಎಸ್ ಐ ಟಿ ರಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಕಡೆ ಸರ್ಚ್ ಮಾಡಿ ಏನೂ ಇಲ್ಲ ಅಂತಕ್ಕಂತದ್ದು ಗೊತ್ತಾಗಿದೆ. ಆತನ ಬಣ್ಣ ಬಯಲಾದಮೇಲೆ ಧರ್ಮಸ್ಥಳಕ್ಕೆ ಕಳಂಕ ತರುವ ಕೆಲಸ ಮಾಡಬೇಕಿತ್ತಾ ಈ ರಾಜ್ಯ ಸರ್ಕಾರ ? ಯಾರೋ ಒಬ್ಬ ಹೇಳಿದ ಮಾತ್ರಕ್ಕೆ ಇಡೀ ಶ್ರೀ ಕ್ಷೇತ್ರದತ್ತ ಅನುಮಾನದಿಂದ ನೋಡುವಂತಾಗಿದೆ. ರಾಜ್ಯದ ಜನರಿಗೆ ಅನುಮಾನ ಮೂಡಿಸುವಂತೆ ಮಾಡಿದ್ದು ಇದೇ ರಾಜ್ಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಸನಾತನ ಧರ್ಮ ಉಳಿಸುತ್ತಾರಾ.? ಅಂತ ಹೇಳಕ್ಕೆ ಆಗೋದಿಲ್ಲ ಎಂದು ದೇವನಹಳ್ಳಿಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರುಸರ್ಕಾರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಸಿ.ಎಸ್. ಪುಟ್ಟರಾಜು, ಶಾಸಕರಾದ ಬಿ.ಎನ್. ರವಿಕುಮಾರ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮೂರ್ತಿರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ರಮೇಶ್ ಗೌಡ, ಚೌಡರೆಡ್ಡಿ ರವರು, ಮಹಿಳಾ ರಾಜ್ಯಾಧ್ಯಕ್ಷ ರಶ್ಮಿ ರಾಮೇಗೌಡ, ಜಿಲ್ಲಾಧ್ಯಕ್ಷ ಬಿ.ಮುನೇಗೌಡರವರು, ಅಧ್ಯಕ್ಷ ಆರ್.ಮುನೇಗೌಡರವರು ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.