ದೊಡ್ಡಬಳ್ಳಾಪುರ: 17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.
ಮೃತ ಬಾಲಕನನ್ನು 17 ವರ್ಷದ ( ಅಪ್ರಾಪ್ತನಾದ ಕಾರಣ ಗೌಪ್ಯತೆ ಕಾಪಾಡಲಾಗಿದೆ).
ನಿನ್ನೆ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿದ್ದು, ಪುಂಡರ ಸಹವಾಸ ಮಾಡಿ ನಶೆಯ ಅಮಲಿಗೆ ದಾಸನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶನಿವಾರ ಕೆಲಸಕ್ಕೆಂದು ತೆರಳಿದವ ಮತ್ತೆ ಮನೆಗೆ ಬಂದಿಲ್ಲವಾಗಿದ್ದು, ಇಂದು ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ನಶೆಯನ್ನು ಸೇವಿಸಲು ಗೆಳೆಯರೊಡನೆ ತೆರಳಿದ ಯುವಕ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ನಾಯಿಗಳು, ಹೆಗ್ಗಣಗಳು ಮೃತನ ಶರರೀವನ್ನು ಕಚ್ಚಿರುವ ಸ್ಥಿತಿಯಲ್ಲಿ ಪೊದೆಯೊಳಗೆ ದೊರೆತಿದೆ.
ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ನಗರವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಅಪ್ರಾಪ್ತ ಬಾಲಕರು ನಶೆಗೆ ದಾಸರಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗಿದೆ.
ಅಲ್ಲದೆ ತಾಲೂಕಿನಲ್ಲಿ ಗಾಂಜಾ ಮಾರಾಟ, ಸೆಲ್ಯುಷನ್, ಪೆಟ್ರೋಲ್ ನಶೆಗೆ ಅಪ್ರಾಪ್ತ ಬಾಲಕರು ದಾಸರಾಗುತ್ತಿದ್ದಾರೆ ಎಂಬ ಆತಂಕದ ಮಾತುಗಳು ಕೇಳಿಬಂದಿದೆ.
ಈ ಕುರಿತು ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಕನ್ನಡಪರ ಹೋರಾಟಗಾರ ಶ್ರೀನಗರ ಬಶೀರ್ ಒತ್ತಾಯಿಸಿದ್ದಾರೆ.