ದೊಡ್ಡಬಳ್ಳಾಪುರ: ಸೆಪ್ಟೆಂಬರ್ 7 ರಂದು ದೇವಾಂಗ ಮಂಡಲಿ ಚುನಾವಣೆ (Devanga Mandali Election) ನಗರದ ತೇರಿನ ಬೀದಿಯಲ್ಲಿರುವ ಅರಳು ಮಲ್ಲಿಗೆ ಗೇಟ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಈ ಚುನಾವಣೆಯಲ್ಲಿ ಎಂ.ಜಿ.ಶ್ರೀನಿವಾಸ್ ನೇತೃತ್ವದ ತಂಡ ಮತ್ತು ಕೆ.ಜಿ.ದಿನೇಶ್ – ಎನ್.ಎಸ್.ಚಿಕ್ಕಣ್ಣ ನೇತೃತ್ವದ ತಂಡ ಸ್ಪರ್ಧೆ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ದೇವಾಗಮಂಡಲಿಯ ಕಚೇರಿಯಲ್ಲಿ ಎಂ.ಜಿ.ಶ್ರೀನಿವಾಸ್ ನೇತೃತ್ವದ ತಂಡ ನಾಮಪತ್ರ ಸಲ್ಲಿಸಿತು.

ಈ ವೇಳೆ ತಂಡದ ಮುಖ್ಯಸ್ಥ ಎಂ.ಜಿ.ಶ್ರೀನಿವಾಸ್ ಸೇರಿದಂತೆ 19 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಮುದಾಯದ ಮುಖಂಡರು ಇದ್ದರು.