ಬೆಂಗಳೂರು: ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗು ಅವರ ಮಗನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಮಾಡಿ, ಕಿರುಕುಳ ನೀಡುತ್ತಿರುವ ಕುರಿತಂತೆ ಮಹಿಳಾ ಆಯೋಗ ದೂರು ನೀಡಿದೆ.
ಕರ್ನಾಟಕ ರತ್ನ ದಿ.ಪುನೀತ್ ರಾಜ್‌ಕುಮಾರ್ ಅವರ ಪೋಟೋ ಬಳಸಿರುವ ಕಿಡಿಗೇಡಿಗಳು, ನಟ ದರ್ಶನ್ ಅವರ ಪತ್ನಿ ಹಾಗೂ ಅವರ ಮಗನ ಬಗ್ಗೆ ಅತ್ಯಂತ ನೀಚ ಭಾಷೆ ಬಳಸಿ, ಅಶ್ಲೀಲ ಕಾಮೆಂಟ್ ಮಾಡಿ, ಹಿಂಸೆ ನೀಡುತ್ತಿದ್ದಾರೆ ಎಂದು ಪತ್ರಕರ್ತ ಭಾಸ್ಕರ್ ರಾವ್ ಅವರು ಆರೋಪಿಸಿ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
ಶ್ರೀಮತಿ ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ.#vijaylakshmi #DarshanThoogudeepa pic.twitter.com/eFz5sNs3Zp
— Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) August 28, 2025
ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಅವರು ವಿಜಯಲಕ್ಷ್ಮೀ ದರ್ಶನರವರ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದರ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಮಾಜಿ ಸಂಸದೆ ರಮ್ಯ ವಿರುದ್ಧ ಇದೇ ರೀತಿ ಅಶ್ಲೀಲ ಸಂದೇಶ ಕಳುಹಿಸಲಾಗಿದೆ ಎಂದು ದೊಡ್ಡ ಸುದ್ದಿಯಾಗಿ ಹಲವರ ಬಂಧನವಾಗಿತ್ತು. ಆದರೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ಮಗನ ವಿರುದ್ಧ ಅಶ್ಲೀಲ ಸಂದೇಶ ಮಾಡಿದ್ದರು ಖಾಸಗಿ ಚಾನಲ್‌ಗಳಲ್ಲಿ ಸುದ್ದಿಯಾಗುತ್ತಿಲ್ಲ, ಚರ್ಚೆಯಾಗುತ್ತಿಲ್ಲ, ಆಕ್ಷೇಪ ವ್ಯಕ್ತವಾಗುತ್ತಿಲ್ಲ, ಅಲ್ಲದೆ ದೇಶದಲ್ಲಿ ನಡೆಯುವ ಪ್ರಮುಖ ವಿಚಾರದ ಬಗ್ಗೆ ಮಾತಾಡುವ ರಮ್ಯ ಅವರು ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ ಏಕೆ ಎಂದು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.