ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತಂತೆ ಖಾಸಗಿ ಸುದ್ದಿವಾಹಿನಿಗಳು (private channels) ಸುಜಾತ ಭಟ್ ಅವರನ್ನು ಬೆನ್ನತ್ತಿ, ಕಿರುಕುಳ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಎಸ್‌ಐಟಿ ವಿಚಾರಣೆ ಬಳಿಕ ಸುಜಾತ ಭಟ್ ಫುಲ್ ರಾಂಗ್ | Sujatha Bhat | Dharmasthala Case
— Sanjevani News (@sanjevaniNews) August 28, 2025
.
.
.
.
.
#sujathabhat #dharmasthalacase #chennayya #dhoothamedia #mdsameer #sit pic.twitter.com/qrkssFmOLc
ಈ ಕುರಿತಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಎಸ್‌ಐಟಿ ಮುಖ್ಯಸ್ಥರಿಗೆ ಸುಜಾತ ಭಟ್ ಅವರಿಗೆ ರಕ್ಷಣೆ ನೀಡುವಂತೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪತ್ರವನ್ನು ಪರಿಗಣಿಸುವ ಮೂಲಕ, ಧರ್ಮಸ್ಥಳದಲ್ಲಿ ಮಹಿಳೆಯರ/ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ. ನಾಪತ್ತೆ, ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರವು ತಮ್ಮ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿದೆ.
SIT ರಚನೆಯಾಗಿ ಧರ್ಮಸ್ಥಳ ವಿಚಾರವಾಗಿ ತನಿಖೆ ನಡೆಯುತ್ತಿರುವ ವೇಳೆ ಸುಜಾತಾ ಭಟ್ ಅವರ ಮೇಲಾಗುತ್ತಿರುವ ಮಾನಸಿಕ ಕಿರುಕುಳವು ಮಿತಿಮೀರಿದೆ. ಸತ್ಯಾಸತ್ಯತೆಗಳು ತನಿಖೆಯಿಂದ ಹೊರಬರಬೇಕೇ ಹೊರತು, ಮಹಿಳೆಯ ತೇಜೋವಧೆಯಿಂದಲ್ಲ.#JusticeForWomen #RespectForWomen #StopHarassment #WomenSafety #DignityForWomen #TruthShallPrevail pic.twitter.com/uLCnDzVvYI
— Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) August 28, 2025
ಎಸ್‌ಐಟಿ ರಚನೆಗಾಗಿ ಉಲ್ಲೇಖ ಮಾಡಲಾದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರರಾದ ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರನ್ನು ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು, ತಡ ರಾತ್ರಿಯಲ್ಲಿ ಅವರ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ರಾಜ್ಯ ಮಹಿಳಾ ಆಯೋಗವು ಗಮನಿಸಿರುತ್ತದೆ.
ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ಥರು, ನಿರ್ಭೀತಿಯಿಂದ ದೂರನ್ನು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಆಯೋಗವು ಒತ್ತಾಯಿಸುತ್ತದೆ.
ಈ ಪ್ರಕರಣದ ದೂರುದಾರರಾದ ಸುಜಾತಾ ಭಟ್ ರವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿರುತ್ತದೆ. ಸದರಿ ವಿಷಯವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ತಾವು ಕೂಡಲೇ, ವಿಶೇಷ ತನಿಖಾ ತಂಡದಿಂದ ಸುಜಾತಾ ಭಟ್, ಇವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.