ದೊಡ್ಡಬಳ್ಳಾಪುರ; ಭಾನುವಾರ ನಡೆಯಲಿರುವ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ (Ghati Subrahmanya temple) ಸೆ.7 ರಂದು ಸಂಜೆ 4.30 ಸಮಯಕ್ಕೆ ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಈ ತಿಂಗಳ 7 ತಾರೀಕಿನ ರಾತ್ರಿ 8.58ಕ್ಕೆ ಶುರುವಾಗಿ ಎಂಟನೇ ತಾರೀಕಿನ ದಿನದ ಪ್ರಾರಂಭಿಕ 22 ನಿಮಿಷಕ್ಕೆ ಮುಕ್ತಾಯವಾಗುವ ವಿಶೇಷವಾದ ರಾಹುಗ್ರಸ್ತ ಚಂದ್ರಗ್ರಹಣ ವಿವಿಧ ಕಾಲ ಘಟ್ಟವನ್ನು ವ್ಯಾಪಿಸಿಕೊಳ್ಳುತ್ತದೆ.
ಏಷ್ಯಾ ಖಂಡದ ಬಹುತೇಕ ಕಡೆ ಗೋಚರಿಸುವ ಸೆ.7ರ ಚಂದ್ರಗ್ರಹಣವು ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್ ದೇಶಗಳ ಹಲವೆಡೆಯೂ ಗೋಚರಕ್ಕೆ ಬರುತ್ತಿದ್ದು, ಇದು 2025ನೇ ಇಸವಿಯ ಬಹು ಮುಖ್ಯ ಚಂದ್ರಗ್ರಹಣವಾಗಿದೆ.
ಹಿಂದೂ ಧರ್ಮದಲ್ಲಿ ಚಂದ್ರಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಖಗೋಳ ಘಟನೆಯಾಗಿದ್ದು, ಇದು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ.
ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಇತಿಹಾಸ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ (Ghati Subrahmanya temple) ಸೆ.7 ರಂದು ಸಂಜೆ 4.30 ಸಮಯಕ್ಕೆ ಮುಚ್ಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರತಿ ದಿನ ಸಾಮಾನ್ಯವಾಗಿ 8.30 ರವರೆಗೂ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಆದರೆ ಚಂದ್ರಗ್ರಹಣದ ಹಿನ್ನಲೆಯಲ್ಲಿ ಸಂಜೆ 4.30 ಗಂಟೆಗೆ ಬಂದ್ ಮಾಡಲಾಗುತ್ತಿದೆ. ಮರುದಿನ ಬೆಳಿಗ್ಗೆ ದೇವಾಲಯ ಶುದ್ದೀಕರಣದ ಬಳಿಕ ಬಾಗಿ ತೆರಯಲಾಗುತ್ತದೆ.