ಬೆಂಗಳೂರು: ಇಂದು ಶಿಕ್ಷಕರ ದಿನಾಚರಣೆ (Teachers Day), ಪ್ರಜ್ಞಾವಂತ ಪ್ರಜೆಗಳನ್ನು ಕಾರ್ಖಾನೆಗಳಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ, ಅವರು ಶ್ರೇಷ್ಠ ಶಿಕ್ಷಕರಿಂದಲೇ ತಯಾರಾಗಬೇಕಾಗುತ್ತದೆ ಅಂತಹ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿರುವುದರಿಂದ ಸಮಾಜದಲ್ಲಿ ಇಂದಿಗೂ ಅವರಿಗೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಲಾಗಿದೆ.
ಇಂತಹ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಸಪ್ಟೆಂಂಬರ್-5, ಶಿಕ್ಷಕರ ದಿನಾಚರಣೆ.
ಇಂದು ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಆದರ್ಶ ಶಿಕ್ಷಕರಾಗಿಯೂ ಹೆಸರುವಾಸಿಯಾಗಿದ್ದ ಅವರ ಜನ್ಮದಿನವಾದ ಸೆ.5ನ್ನು ಪ್ರತೀ ವರ್ಷವೂ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.