ಚಿಕ್ಕಬಳ್ಳಾಪುರ; ಸಹಪಾಠಿ ಯುವತಿಯೋರ್ವಳು ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಪೆರೇಸಂದ್ರ ಕ್ರಾಸ್ ನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬಿರ್(26 ವರ್ಷ) ಎಂದು ಗುರುತಿಸಲಾಗಿದೆ.
ಶಾಂತ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್ ಕಾಲೇಜಿನ ಅಲೈಡ್ ಸೈನ್ಸ್ ಕೋರ್ಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಮೊಹಮ್ಮದ್ ಶಬ್ಬಿರ್, ಭಾನುವಾರ ತನ್ನ ಹಾಸ್ಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ರೂಮಿನ ಕಿಟಕಿಗೆ ಪಂಚೆಯನ್ನು ಕಟ್ಟಿ, ಅದರಿಂದ ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೆರೇಸಂದ್ರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ, ಶಬ್ಬಿರ್‌ನ ಕೋಣೆಯಲ್ಲಿ ಡೆತ್ ನೋಟ್ ಲಭ್ಯವಾಗಿದೆ.
ಮೃತ ವಿದ್ಯಾರ್ಥಿ ಬರೆದ ಡೆತ್ ನೋಟ್‌ನಲ್ಲಿ, ‘ಐ ಡಿಡ್ ನಾಟ್ ಸ್ಟಾಪ್ ಎನಿಥಿಂಗ್ ಅನ್‌ಟಿಲ್, ಐ ಆಲ್ ವೇಸ್ ಲವ್ ಫಾರ್‌ಎವೆರ್, *** ಯೂ ಆರ್‌ಮೈ ಫಸ್ಟ್ ಆ್ಯಂಡ್ ಯೂ ಆರ್‌ಮೈ ಲಾಸ್ಟ್ ‘ ಎಂದು ಬರೆಯಲಾಗಿದ್ದು, ನೋಟ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೃತ ಶಬ್ಬಿರ್‌ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಹುಡುಗಿ ಕಳೆದ ಕೆಲವು ದಿನಗಳಿಂದ ಶಬ್ಬಿರ್‌ನ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿ (ಬ್ಲಾಕ್ ಮಾಡಿ) ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ಶಬ್ಬಿರ್ ಮನನೊಂದಿದ್ದ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ಪೆರೇಸಂದ್ರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.