Canter ploughs into Ganesh idol immersion procession.. Death toll rises to 9..!

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ನುಗ್ಗಿದ ಕ್ಯಾಂಟರ್.. 6 ಮಂದಿ ದುರ್ಮರಣ| Video

ಹಾಸನ: ಇಂದು ರಾತ್ರಿ ಗಣೇಶ (Ganesha) ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟ‌ರ್ ಲಾರಿ ನುಗ್ಗಿದ ಪರಿಣಾಮ, 6 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ಯಾಂಟರ್ ಲಾರಿಗೆ ಬೈಕ್ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಕ್ಯಾಂಟ‌ರ್ ಚಾಲಕ ಯತ್ನಿಸಿದ್ದಾನೆ. ಈ ವೇಳೆ ರಸ್ತೆ ಡಿವೈಡರ ದಾಟಿದ ಕ್ಯಾಂಟರ್ ಲಾರಿ ಮೆರವಣಿಗೆ ಕಡೆಗೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿದ್ದ 6 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಸಂಸದ ಶ್ರೇಯಸ್‌ ಪಟೇಲ್, ಶಾಸಕ ಎಚ್‌.ಡಿ. ರೇವಣ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದಿದ್ದಾರೆ.

ಆದರೆ ಮದ್ದೂರಿ ಗಲಭೆ ಪ್ರಕರಣದ ಬೆನ್ನಲ್ಲೇ ಹಾಸನ ದುರ್ಘಟನೆ ರಾಜಕೀಯ ಬಣ್ಣ ಪಡೆಯುತ್ತಿದೆ.

ರಾಜಕೀಯ

ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಈಶ್ವರ ಮತ್ತು ರಾಮ ಎರಡೂ ದೇವರುಗಳ ಹೆಸರುಗಳಿವೆ: ಸಿಎಂ ಸಿದ್ದರಾಮಯ್ಯ

ನಾನು ಕೂಡ ಹಿಂದೂ. ನನ್ನ ಹೆಸರಿನಲ್ಲಿ ಈಶ್ವರ ಮತ್ತು ರಾಮ ಎರಡೂ ದೇವರುಗಳ

ಬಿಜೆಪಿಯವರು ಪ್ರಚೋದನಾ ಕಾರಿಯಾದ ಭಾಷಣ ಮಾಡಿದರೆ ಏನು ಮಾಡಬೇಕು? ಶಾಂತಿ ನೆಮ್ಮದಿಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಅದಕ್ಕಾಗಿ ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: Cmsiddaramaiah

[ccc_my_favorite_select_button post_id="113856"]
ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ವನ್ನು ಅರ್ಪಣೆ CM

[ccc_my_favorite_select_button post_id="113575"]
7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ತಮ್ಮ 2 ದಿನಗಳ ಚೀನಾ ಭೇಟಿಯನ್ನು ಮುಗಿಸಿ ದೇಶಕ್ಕೆ ಮರಳಿದ್ದಾರೆ. ಇದನ್ನು ಅವರು 'ಉತ್ಪಾದಕ' ಭೇಟಿ ಎಂದು ಬಣ್ಣಿಸಿದ್ದಾರೆ.

[ccc_my_favorite_select_button post_id="113432"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಸ್ಕೇಟಿಂಗ್ ಸ್ಪರ್ಧೆ: ದೊಡ್ಡಬಳ್ಳಾಪುರದ ಎಂಎಸ್‌ವಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಸ್ಕೇಟಿಂಗ್ ಸ್ಪರ್ಧೆ: ದೊಡ್ಡಬಳ್ಳಾಪುರದ ಎಂಎಸ್‌ವಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

[ccc_my_favorite_select_button post_id="113787"]
ದೊಡ್ಡಬಳ್ಳಾಪುರ: ಯುವಕ ಆತ್ಮಹತ್ಯೆ..! ಕಾರಣ ನಿಗೂಢ

ದೊಡ್ಡಬಳ್ಳಾಪುರ: ಯುವಕ ಆತ್ಮಹತ್ಯೆ..! ಕಾರಣ ನಿಗೂಢ

22ವರ್ಷದ ಯುವಕ ನೋರ್ವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ** ಬುಧವಾರ ರಾತ್ರಿ ನಡೆದಿದೆ.

[ccc_my_favorite_select_button post_id="113770"]
ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ನುಗ್ಗಿದ ಕ್ಯಾಂಟರ್.. 9ಕ್ಕೆ ಏರಿದ ಮೃತರ ಸಂಖ್ಯೆ ..!| Video

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ನುಗ್ಗಿದ ಕ್ಯಾಂಟರ್.. 9ಕ್ಕೆ ಏರಿದ ಮೃತರ

ಶುಕ್ರವಾರ ರಾತ್ರಿ ಗಣೇಶ (Ganesha) ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟ‌ರ್ ಲಾರಿ ನುಗ್ಗಿದ ಪರಿಣಾಮ, 9 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದೆ.

[ccc_my_favorite_select_button post_id="113840"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!