ದೊಡ್ಡಬಳ್ಳಾಪುರ: ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾ ಬೆಂಗಳೂರು ಇವರ ಕಾನೂನು ನೆರವು ಸಮಿತಿ ವತಿಯಿಂದ ತಾಲೂಕಿನ ಆರೂಢಿ (Arudi) ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ (Legal awareness) ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಲಾಯಿತು. ಬಳಿಕ ಸಂಜೆ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಾಟಕ, ನೃತ್ಯ, ಗೀತೆ ಗಾಯನದ ಮೂಲಕ ಫೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಗುಡ್ ಟಚ್, ಬ್ಯಾಡ್ ಟಚ್, ಸೈಬರ್ ಕ್ರೈಂ, ಟ್ರಾಫಿಕ್ ರೂಲ್ಸ್, ಸಾಮಾಜಿಕ ಜಾಲತಾಣ ಬಳಕೆ ಮುಂತಾದ ವಿಚಾರಗಳ ಕಾಯ್ದೆಗಳ ವಿವರಿಸಿ ಅರಿವು ಮೂಡಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ನರಸೀಯಪ್ಪ, ಮುಖ್ಯ ಶಿಕ್ಷಕ ಸಿದ್ದರಾಮಯ್ಯ, ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾ ಕಾಲೇಜಿನ ಕಾನೂನು ನೆರವು ಸಮಿತಿ ಮುಖ್ಯಸ್ಥ ಪ್ರಿಯಾಂಕ್ ಜಗವಂಶಿ ಸೇರಿದಂತೆ ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾ ಬೆಂಗಳೂರಿನ 140 ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.