ದೊಡ್ಡಬಳ್ಳಾಪುರ: ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ಹೊರಭಾಗದಲ್ಲಿನ ಐತಿಹಾಸಿಕ ಅರಸಮ್ಮ ದೇವಾಲಯದ ಬಾಗಿಲಿನ ಬೀಗ ಹೊಡೆದಿರುವ ಹಾಗೂ ಬಾಗಿಲಿನ ಬಳಿ ಕಸ ಇರುವುದನ್ನು ಸೋಮವಾರ ಸ್ಥಳೀಯರು ಗಮನಿಸಿ ದೊಡ್ಡಬೆಳವಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.