ದೊಡ್ಡಬಳ್ಳಾಪುರ: ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆ ಸತತ 3ನೇ ಅಪಘಾತ (Accident) ಪ್ರಕರಣಗಳು ವರದಿಯಾಗುತ್ತಿದೆ.
ಮಂಗಳವಾರ ರಾತ್ರಿ ಅರಳು ಮಲ್ಲಿಗೆ ಗೇಟ್ ಬಳಿ ದೇವಸ್ಥಾನಕ್ಕೆ ಕಾರು ಡಿಕ್ಕಿ ಪರಿಣಾಮ ಚಾಲಕನ ಸ್ಥಿತಿ ಗಂಭೀರ, ಬುಧವಾರ ಬೆಳಗ್ಗೆ ಅರಳು ಮಲ್ಲಿಗೆ ಕೆರೆ ಕಟ್ಟೆ ಮೇಲೆ ಕ್ಯಾಂಟರ್ – ಕಂಟೇನರ್ ಡಿಕ್ಕಿ ಘಟನೆಯ ಬಳಿಕ ಈಗ ಪಾಲನಜೋಗಿಹಳ್ಳಿ ರಸ್ತೆಯಲ್ಲಿ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿದೆ.
ದೊಡ್ಡಬಳ್ಳಾಪುರ ಕಡೆಯಿಂದ ಬಂದ ಅಪರಿಚಿತ ಬೊಲೆರೋ ವಾಹನ, ಪಾಲನಜೋಗಿಹಳ್ಳಿ ಕಡೆಯಿಂದ ಬಂದ ಬೈಕ್ ಸವಾರ ಪ್ರೆಂಡ್ಸ್ ಹಾಲ್ ಬಳಿ ಡಿವೈಡರ್ ನಲ್ಲಿ ತಿರುವು ಪಡೆಯುವ ವೇಳೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಬೈಕ್ ಸವಾರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ರಸ್ತೆಯಲ್ಲಿ ರಕ್ತ ಚೆಲ್ಲಾಡಿದೆ. ಸ್ಥಳಕ್ಕೆ ಅಂಬುಲೆನ್ಸ್ಗೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಗಾಯಳುವಿನ ಗುರುತು ಪತ್ತೆಯಾಗಿಲ್ಲ. (ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.