ದೊಡ್ಡಬಳ್ಳಾಪುರ: ಸುಮಾರು 250 ವರ್ಷಕ್ಕೂ ಹೆಚ್ಚು ಪುರಾತನವಾದ ಶ್ರೀ ಓಬಳೇಶ್ವರ ದೇವಾಲಯದಲ್ಲಿ (Obaleshwara temple) ಕಾಣಿಕೆ ಹುಂಡಿ ಕಳವು ಮಾಡಿರುವ ಘಟನೆ (stolen) ತಾಲೂಕಿನ ದಾಸಗೊಂಡನಹಳ್ಳಿಯಲ್ಲಿ ನಡೆದಿದೆ.

ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೇವಾಯಲದ ಬಾಗಿಲು ತೆರೆದಿರುವ ಕಳ್ಳರು ಸುಮಾರು ಎರಡು ವರ್ಷಗಳಿಂದ ಲಕ್ಷಾಂತರ ರೂ ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿರುವ ಹುಂಡಿಯನ್ನು ಹೊತ್ತೊಯ್ದಿದ್ದಾರೆ.
ಈ ಮುಂಚೆ ಕೂಡ ಈ ದೇವಾಲಯದಲ್ಲಿ ಹುಂಡಿಯನ್ನು ಹೊಡೆದು ಕಾಣಿಕೆ ಹಣ ಕದ್ದೋಯ್ಯಲಾಗಿತ್ತಂತೆ. ಆದರೆ ಶನಿವಾರ ರಾತ್ರಿ ಹುಂಡಿಯನ್ನೇ ಕಳ್ಳರು ಕದ್ದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.