ರಾಯಚೂರು: ಕಾರ್ತಿಕ ಪೌರ್ಣಿಮೆ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಬುಧವಾರ ರಾತ್ರಿ ತುಂಗ ಭದ್ರಾ ನದಿಗೆ ತುಂಗಾರತಿ (Tungarati) ಮಾಡಿ ಸಂಭ್ರಮಿಸಲಾಯಿತು.
ಶ್ರೀಮಠದ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರು ತುಂಗ ಭದ್ರಾ ನದಿಗೆ ತುಂಗಾರತಿ ನೆರವೇರಿಸಿದರು.
ರಾಘವೇಂದ್ರ ಮಠದಿಂದ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೆರವಣಿಗೆಯೊಂದಿಗೆ ತುಂಗಭದ್ರಾ ನದಿ ತೀರಕ್ಕೆ ತಂದು ನದಿ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಠದ ಪೀಠಾಪತಿಗಳಾದ ಸುಬುಧೇಂದ್ರ ತೀರ್ಥರು ತುಂಗಭದ್ರಾ ನದಿಗೆ ಆರತಿ ಮಾಡಿ, ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.