ದೊಡ್ಡಬಳ್ಳಾಪುರ: ನಗರದ ರಂಗಪ್ಪ ವೃತ್ತದ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ಸೋಮವಾರ ನ.10ರಂದು ಬೆಳಿಗ್ಗೆ 9ರಿಂದ 4 ಗಂಟೆಯವರೆಗೆ ಶಿವಶಕ್ತಿ ಮಹಾಯಜ್ಞವನ್ನು ಹಿಮಾಲಯದ ತಪಸ್ವಿ ನಾಗಾಸಾಧು (Naga sadhus) ರಾಜ ರಾಜೇಶ್ವರ್ ಪುರಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಾಗಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ನಾಗಾಸಾಧುಗಳು (Naga sadhus) ಸೋಮವಾರ ನಡೆಯುವ ಶಿವ ಶಕ್ತಿ ಮಹಾಯಜ್ಞಕ್ಕೆಂದು ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದಾರೆ.