ಬೆಂಗಳೂರು ಗ್ರಾಮಾಂತರ ಜಿಲ್ಲೆ; ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ (Working Journalists Association elections) ದೇವನಹಳ್ಳಿಯ ದೇವನಹಳ್ಳಿಯ ಪತ್ರಕರ್ತರ ಭವನದಲ್ಲಿ ನಿನ್ನೆ ನಡೆದಿದ್ದು, ರಾತ್ರಿ 11.30 ರ ಸುಮಾರಿಗೆ ಫಲಿತಾಂಶ ಪ್ರಕಟಿಸಲಾಗಿದೆ.
ಅಧ್ಯಕ್ಷರಾಗಿ ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರಮೇಶ್, ಖಜಾಂಚಿಯಾಗಿ ಜೆ.ಮುನಿರಾಜು, ರಾಜ್ಯ ಸಮಿತಿ ಸದಸ್ಯರಾಗಿ ಸೂಲಿಬೆಲೆ ಮಂಜುನಾಥ್, 3 ಮಂದಿ ಉಪಾಧ್ಯಕ್ಷರಾಗಿ ರಫೀ ಉಲ್ಲಾ, ಮುನಿ ವೀರಣ್ಣ, ಕೃಷ್ಣ ನಾಯಕ್, 3 ಜನ ಸಹಕಾರ್ಯದರ್ಶಿಗಳಾಗಿ ಸುರೇಶ್, ಎಂ.ಆರ್. ನಾಗರಾಜ್, ಆರ್. ಸತೀಶ್ ಆಯ್ಕೆಯಾಗಿದ್ದಾರೆ.
15 ಮಂದಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶ್ರೀನಿವಾಸ್ ಗಾಂಧಿ, ಜಗದೀಶ ವಿ., ಜಯಲಕ್ಷ್ಮಿ, ಸುನೀಲ್ ವಿ.,ಗಂಗರಾಜ ಶಿರವಾರ, ಗೋಪಾಲಕೃಷ್ಣ, ಎನ್.ಸಿ. ಮುನಿವೆಂಕಟರಮಣ, ವಿ.ಕೃಷ್ಣಮೂರ್ತಿ, ಅಬ್ದುಲ್ ಮೊಯಿದ್, ಚಂದ್ರಪ್ಪ, ಎಸ್.ರಾಜಗೋಪಾಲ್, ಗೋಪಿನಾಥ್, ಪ್ರಕಾಶ್. ಸಿ., ಎಂ.ಆರ್.ಮಂಜುನಾಥ್, ರಂಗನಾಥ್. ಆರ್ ವಿಜೇತರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸುಗ್ಗರಾಜು ತಂಡ ಹಾಗೂ ಆರ್.ರಮೇಶ್ ತಂಡ ಸ್ಪರ್ಧಿಸಿತ್ತು.
ದೊಡ್ಡಬಳ್ಳಾಪುರಕ್ಕೆ ಮೂರು ಪ್ರಮುಖ ಹುದ್ದೆ
ಈ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಆರ್.ರಮೇಶ್ ಪ್ರಧಾನಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಜೆ.ಮುನಿರಾಜು, ಸಹ ಕಾರ್ಯದರ್ಶಿಯಾಗಿ ಸತೀಶ್. ಆರ್., ನಿರ್ದೇಶಕರಾಗಿ ಗಂಗರಾಜ ಶಿರವಾರ, ಚಂದ್ರಪ್ಪ ಆಯ್ಕೆಯಾಗಿದ್ದು,
ಪ್ರಮುಖ ಮೂರು ಹುದ್ದೆಗಳಾದ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ ಸಹಕಾರ್ಯದರ್ಶಿ ಸ್ಥಾನ ದೊಡ್ಡಬಳ್ಳಾಪುರದ ಪಾಲಾಗಿದೆ.