ದೊಡ್ಡಬಳ್ಳಾಪುರ; ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಮೇಳದ ಪ್ರಸಿದ್ದ ಕಲಾವಿದರಿಂದ ಕಮಲಶಿಲೆ ಕ್ಷೇತ್ರ ಮಹಾತ್ಮೆ ( ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಚರಿತ್ರೆ) ಯಕ್ಷಗಾನ (Yakshagana) ಪ್ರದರ್ಶನ ನಗರದ ಶ್ರೀ ನೆಲದಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸದಾಶಿವ ಅಮೀನ್, ಮಧುಕರ ಹೆಗ್ಗಡೆ ಭಾಗವತಿಕೆ, ವಿಶ್ವನಾಥ ಅವರ ಸಂಗೀತದಲ್ಲಿ ಮೂಡಿಬಂದ ಯಕ್ಷಗಾನ ಪ್ರಸಂಗದಲ್ಲಿ ಕಲಾವಿದರ ಮನೋಜ್ಞ ಅಭಿನಯದ ಯಕ್ಷಗಾನ ಬಯಲಾಟ ನೆರೆದಿದ್ದ ಸಭಿಕರನ್ನು ರೋಮಾಂಚನಗೊಳಿಸಿ ಬೇರೊಂದು ಲೋಕಕ್ಕೆ ಕರೆದೊಯ್ದಿತು.
ಬ್ರಾಹ್ಮೀ ದುರ್ಗಾಪರಮೇಶ್ವರಿಯ ದರ್ಶನಕ್ಕೆ ಪ್ರೇಕ್ಷಕರು ಭಾವಪರವಶರಾದರು.