ಬೆಂಗಳೂರು: ದಿತ್ವಾ ಚಂಡಮಾರುತದ (Ditwah Cyclone) ಅಬ್ಬರದ ಪರಿಣಾಮ ಶ್ರೀಲಂಕಾದಲ್ಲಿ 130 ಮಂದಿ ಸಾವನ್ನಪ್ಪಿದ್ದಾರೆ, 130ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ವಿಪತ್ತು ನಿರ್ವಹಣಾ ತಂಡ 43,995 ಮಂದಿಯನ್ನು ಸ್ಥಳಾಂತರಗೊಳಿಸಿದೆ. ನೆರೆಯ ಶ್ರೀಲಂಕಾಕ್ಕೆ ಭಾರತ ಸಹಾಯಹಸ್ತ ಚಾಚಿದೆ.
මේවා බලලා හැදෙන්න#FloodSL #ditwah #srilanka pic.twitter.com/W3HINKzkal
— Rose (@Roseandfalcon) November 29, 2025
ಆಪರೇಶನ್ ಸಾಗರಬಂಧು ಹೆಸರಿನಲ್ಲಿ ಭಾರತದ ವಿಮಾನ 12 ಟನ್ ನೆರವಿನ ಸಾಮಗ್ರಿಯನ್ನು ಶ್ರೀಲಂಕಾದಲ್ಲಿಳಿಸಿದೆ. ಇದರಲ್ಲಿ ಟೆಂಟ್‌ಗಳು, ಟಾರ್ಪಲ್‌ಗಳು, ಆರೋಗ್ಯ ಸುರಕ್ಷಾ ಸಾಧನಗಳು, ಸಿದ್ದ ಆಹಾರಗಳು ಸೇರಿವೆ.
ದಿತ್ವಾ ಚಂಡಮಾರುತ ಭಾನುವಾರ ಬೆಳಗ್ಗೆ ತಮಿಳುನಾಡಿಗೆ ಅಪ್ಪಳಿಸಲಿದೆ. ಇದರಿಂದ ಆಂಧ್ರಪ್ರದೇಶ ಸೇರಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ, ಬಲವಾದ ಗಾಳಿ ಮತ್ತು ಪ್ರವಾಹದ ಪರಿಸ್ಥಿತಿ ಉಂಟಾಗುವ ನಿರೀಕ್ಷೆಯಿದೆ.
The Nayāru bridge connecting Mullaitivu to Trincomalee has collapsed, bringing transport to a complete standstill. #Ditwah pic.twitter.com/0cpB0l3YEB
— 𝐒𝐭𝐫𝐞𝐞𝐭𝐬 𝐨𝐟 𝐓𝐚𝐦𝐢𝐥𝐞𝐞𝐥𝐚𝐦 👣 (@fromtamileelam) November 29, 2025
ತಮಿಳುನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುವ ಮುನ್ಸೂಚನೆಯಿರುವ ಕಾರಣ ಚೆನ್ನೈನಿಂದ ಹೊರಡುವ 54 ವಿಮಾನ ಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ.
ಇದರ ಪರಿಣಾಮ ಮಧುರೈ, ತಿರುಚಿರಾಪಳ್ಳಿ, ತೂತುಕುಡಿ, ಸೇಲಂ, ಬೆಂಗಳೂರು, ಹೈದರಾಬಾದ್ ಮತ್ತು ಜಾಫ್ರಾ ಮುಂತಾದ ಸ್ಥಳಗಳಿಗೆ ಸಂಚರಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ.
ನಿರ್ಗಮನ ಮತ್ತು ಆಗಮನ ಎರಡು ಮಾರ್ಗದ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ, ಸೋಮವಾರ ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮಾ, ಯಾನಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಪುದುಚೆರಿ, ತಮಿಳುನಾಡಿನ ಕಡಲೂರು, ಮೈಲಾಡುತುರೈ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳ, ಕರ್ನಾಟಕ, ತೆಲಂಗಾಣಗಳಲ್ಲೂ ಭಾರೀ ಮಳೆಯ ನಿರೀಕ್ಷೆಯಿದೆ.
ದೊಡ್ಡಬಳ್ಳಾಪುರದಲ್ಲಿ ಚುಮುಚುಮು ಚಳಿ
ದಿತ್ವಾ ಚಂಡಮಾರುತದ ಪರಿಣಾಮ ಶನಿವಾರದಿಂದಲೆ ದೊಡ್ಡಬಳ್ಳಾಪುರ ತಾಲೂಕಿನಾಧ್ಯಂತ ತಂಡಿ ವಾತಾವರಣ ಸೃಷ್ಟಿಯಾಗಿದೆ.
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಚಳಿ ವಿಪರೀತವಾಗಿದ್ದು, ಭಾನುವಾರ ಬೆಳ್ಳೆಗೆಯಿಂದ ತೀರ ಸಣ್ಣ ಮಟ್ಟದಲ್ಲಿ ಹನಿ ಬೀಳುತ್ತಿದ್ದು, ಸಮಯ 9 ಕಳೆದರು ಸಾರ್ವಜನಿಕರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.
ರಾಗಿ ಬೆಳೆ ಸಂರಕ್ಷಿಸಿಕೊಳ್ಳಲು ಕೃಷಿ ಇಲಾಖೆ ಸಲಹೆ
ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ಭಾರತ ದೇಶದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 02 ರವರೆಗೆ 4 ದಿನಗಳ ಕಾಲ ಜಿಲ್ಲೆಯ ಕೆಲವು ಭಾಗಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ರಾಗಿ ಬೆಳೆಯು ವಿವಿಧ ಹಂತದಲ್ಲಿದ್ದು, ಮಳೆ ಗಾಳಿ ಸಂದರ್ಭದಲ್ಲಿ ನೆಲಕುರುಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈತರು ತಮ್ಮ ಜಮೀನಿನಲ್ಲಿ ಇರುವ ಬೆಳೆಯನ್ನು ಸಣ್ಣ ಸಣ್ಣ ಕಟ್ಟುಗಳಾಗಿ / ಕುಚ್ಚುಗಳಾಗಿ ಕಟ್ಟಿ ಗಾಳಿಗೆ ಬೀಳದಂತೆ ಜಾಗ್ರತೆ ವಹಿಸುವುದು.
ಕಟಾವಿಗೆ ಬಂದಿರುವ ರಾಗಿಯನ್ನು 4 ರಿಂದ 5 ದಿನ ಮುಂದೂಡಿ ಕಟಾವು ಮಾಡುವುದು. ಈಗಾಗಲೇ ಕಟಾವು ಮಾಡಿದ ರಾಗಿ ಜಮೀನಿನಲ್ಲಿ ಇಟ್ಟಿದ್ದರೆ ತೇವಾಂಶವಿಲ್ಲದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಶೀಲೀಂದ್ರ ಬೆಳೆದು ಹಾಳಾಗದಂತೆ ಶೇಖರಿಸಿ ಸಂರಕ್ಷಿಸುವುದು.
ಜಮೀನಿನಲ್ಲಿ ನೀರು ನಿಲ್ಲದಂತೆ ಸಣ್ಣ ಸಣ್ಣ ಕಾಲುವೆಗಳಾಗಿ ಮಾಡಿ ನೀರು ಬಸಿದು ಹೋಗುವಂತೆ ನೋಡಿಕೊಂಡು ಬೆಳೆ ನಷ್ಟವಾಗದಂತೆ ಕಾಪಾಡಿಕೊಳ್ಳುವಂತೆ ಕೃಷಿ ಇಲಾಖಾ ವತಿಯಿಂದ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.