ನವದೆಹಲಿ: ಅಮೆರಿಕಾದ ಡಾಲರ್ (Dollar) ಎದುರು ರೂಪಾಯಿ (Rupee) ಮೌಲ್ಯ ಐತಿಹಾಸಿಕವಾಗಿ ಪತನಗೊಂಡಿದ್ದು, ಬುಧವಾರ ಒಂದು ಡಾಲರ್‌ಗೆ ಗರಿಷ್ಠ 90 ರೂ.ಗೆ ಕುಸಿತ ಕಂಡಿದೆ.
ಅಂದರೆ ಒಂದು ಡಾಲರ್ ಖರೀದಿಸಲು ನಾವು 90 ರೂ. ನೀಡಬೇಕು! ಇದು ದಾಖಲೆ ಕುಸಿತವಾಗಿದೆ.
2025ರಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಶೇ.5 ರಷ್ಟು ಸವಕಳಿಯಾಗಿದೆ. ಬುಧವಾರ 25 ಪೈಸೆಗಳಷ್ಟು ಇಳಿಕೆ ಯಾಗುವುದರೊಂದಿಗೆ ಹೊಸದಾಗಿ ಇದೇ ಮೊದಲ ಬಾರಿಗೆ ಡಾಲರ್ ಬೆಲೆ 90 ರೂಪಾಯಿ ದಾಟಿದೆ..
ಇನ್ನೂ ಡಾಲರ್ ಎದುರು ರೂಪಾಯಿ ಮೌಲ್ಯ ಮಹಾ ಕುಸಿತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
1 USD ಎದುರು ರೂಪಾಯಿ 60 ಆಗಿದ್ದಾಗ ಮೋದಿ ಬಹಳಷ್ಟು ಗದ್ದಲ ಸೃಷ್ಟಿಸಿದರು ಅದು ಬಹುತೇಕ ಅಬ್ಬರದಿಂದ ಕೂಡಿತ್ತು. ಆದರೆ ಇಂದು, 1 USD ಎಲ್ಲಾ ಐತಿಹಾಸಿಕ ದಾಖಲೆಗಳನ್ನು ಮುರಿದಾಗ, ಅವರು ಮೌನವಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
काश आज ये बंदा इस देश का प्रधानमंत्री होता।
— Manakdeep Singh Kharaud (@Iam_MKharaud) December 3, 2025
तो आज रूपया इस तरह धरातल में न पहुंचता।#JusticeForJyotiJaatav #Rupee #RupeeVsDollar pic.twitter.com/i4WsZSBe1y
ಡಾಲರ್‌ಗೆ 90 ಕುಡಿಸಿದ ಮೋದಿಜೀ, ನಿರ್ಮಲ ಸೀತಾರಾಮನ್ ಕೃಪೆ, ಚಕ್ರವರ್ತಿ ಸೂಲಿಬೆಲೆ ಎಲ್ಲಿ..? ಮುಂತಾದ ಆಕ್ರೋಶದ ನುಡಿಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದೆ.
Coach Nirmala Sitharaman! #RupeevsDollar #NirmalaSitharaman pic.twitter.com/OGhPbl5MMn
— Satish Acharya (@satishacharya) October 17, 2022