ನವದೆಹಲಿ: ಶಿಫ್ಟ್ ಮುಗಿದ ನಂತರವೂ ನೌಕರರಿಗೆ (Employees) ಸಂಸ್ಥೆಯಿಂದ ತಡರಾತ್ರಿ ವೇಳೆ ಬರುವ ಕರೆಗಳನ್ನು ತಡೆಗಟ್ಟುವ ಉದ್ದೇಶದಿಂದ 2025ರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆಯನ್ನು ಈಗ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಉದ್ಯೋಗಿಗಳ ಸಂಪರ್ಕ ಕಡಿತಗೊಳಿಸುವ ಹಕ್ಕು ಈಗಾಗಲೇ ಫ್ರಾನ್ಸ್, ಪೋರ್ಚುಗಲ್ ಹಾಗೂ ಆಸ್ಟ್ರೇಲಿಯಾದಂತಹ ಮುಂದುವರಿದ ದೇಶಗಳಲ್ಲಿ ಜಾರಿಯಲ್ಲಿವೆ. ಇದೀಗ ಸುಳೆಯವರು ಈ ಮಸೂದೆಯನ್ನು ಮಂಡಿಸಿರುವುದರಿಂದ ದೇಶದಲ್ಲಿಯೂ ಅಂತಹ ಕಾನೂನು ಜಾರಿಗೆ ಬರುವ ಸಂಭವ ಇದೆ.
ಕೆಲಸದ ಸಮಯವನ್ನು ಮಿತಿಗೊಳಿಸಲು, ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪಡೆಯಲು ಮತ್ತು, ಸದೃಢವಾದ ಮಾನಸಿಕ-ಆರೋಗ್ಯ ಸುರಕ್ಷತಾ ಕ್ರಮಗಳನ್ನು ಪರಿಚಯಿಸಲು ಈ ಮಸೂದೆ ಪ್ರಯತ್ನಿಸುತ್ತದೆ.
Introduced three forward-looking Private Member Bills in the Parliament:
— Supriya Sule (@supriya_sule) December 5, 2025
The Paternity and Paternal Benefits Bill, 2025, introduces paid paternal leave to ensure fathers have the legal right to take part in their child's early development. It breaks the traditional model,… pic.twitter.com/YjrWw4LFwf
ಕಾಂಗ್ರೆಸ್ ಸಂಸದ ಶಶಿತರೂರ್ ಈ ಮಸೂದೆಗೆ ಬೆ.ಬಲ ಘೋಷಿಸಿದ್ದಾರೆ.
ಮಸೂದೆಯಲ್ಲೇನಿದೆ?
ಹೊಸ ಮಸೂದೆಯಂತೆ ಕೆಲಸದ ಸಮಯ ಮುಗಿದ ನಂತರ ಬಂದ ಕರೆಗಳು ಹಾಗೂ ಇಮೇಲ್‌ಗಳನ್ನು ನೌಕರರು ಯಾವುದೇ ಶಿಸ್ತು ಕ್ರಮದ ಭಯವಿಲ್ಲದೆ, ನಿರ್ಲಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ.
ಇದು ಉತ್ತಮ ಮಸೂದೆಯಾದರೂ ಸಮಯವಲ್ಲದ ಸಮಯದಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಕಾಲ್, ಮೆಸೇಜ್ ಮಾಡುವ, ಉತ್ತರ ನೀಡದಿದ್ದರೆ ಕಿರುಕುಳ ನೀಡುವ ಹಿರಿಯ ಹುದ್ದೆಯಲ್ಲಿರುವವರ ಕಡಿವಾಣ ಹೇಗೆ ಎಂಬ ಪ್ರಶ್ನೆ ಕೇಳಿ ಬಂದಿದೆ.