
ಚಿಕ್ಕಬಳ್ಳಾಪುರ: ಕೇಬಲ್ ಕಳವು ಮಾಡಲು ಬಂದ ಕಳ್ಳರಿಗೆ (Cable Thieves) ರೈತರು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಕಾಚಕಡತ ಗ್ರಾಮದಲ್ಲಿ ನಡೆದಿದೆ.
ರೈತರಿಂದಧರ್ಮದೇಟುತಿಂದಕೇಬಲ್‌ಕಳ್ಳರನ್ನು ಬಾಗೇಪಲ್ಲಿ ತಾಲೂಕಿನ ಅಶೋಕ್, ನವೀನ್ ಎಂದು ಗುರ್ತಿಸಲಾಗಿದೆ. ಕಾಚಕಡತ ಗ್ರಾಮದ ತೋಟಗಳಲ್ಲಿ ಇರುವ ಬೋರ್‌ವೆಲ್ ನ ಕೇಬಲ್ ಪದೇ ಪದೇ ಕಳ್ಳತನವಾಗುತ್ತಿದ್ದರಿಂದ ರೈತರು ಬೇಸತ್ತು ಹೋಗಿದ್ದರು.
ರೈತರ ಕೈಗೆ ಸಿಕ್ಕಿಬಿದ್ದ ಕಳ್ಳರು: ಪ್ರತಿ ಭಾರಿ ಮತ್ತೆ ಕೊಳವೆ ಬಾವಿಗೆ
ಕೇಬಲ್ ಅಳವಡಿಸಲು ಸಾವಿರಾರು ರೂಪಾಯಿಗಳು ಖರ್ಚಾ ಗುತ್ತಿತ್ತು. ಕೇಬಲ್ ಅಳವಡಿಸದಿದ್ದರೆ ಬೆಳೆಗೆ ನೀರು ಹಾಯದೇ ಬೆಳೆಹಾಳಾಗಿನಷ್ಟ ಉಂಟಾಗುತ್ತಿತ್ತು.
ಸಾಕಷ್ಟುಬಾರಿಪೋಲಿಸರಿಗೆ ದೂರು ನೀಡಿದರೂಕೇಬಲ್ ಕಳ್ಳರ ಪತ್ತೆಯಾಗಿರಲ್ಲಿಲ್ಲ. ಬೋರ್ ವೆಲ್ ನ ಕೇಬಲ್ ಕಳ್ಳರ ಕಾಟದಿಂದ ಬೇಸತ್ತಿದ್ದ ರೈತರು ತೋಟಗಳಲ್ಲಿ ಕಾದು ಕುಳಿತಿದ್ದ ರೈತರಿಗೆ ಭಾನುವಾರ ತಡರಾತ್ರಿ ಕೇಬಲ್ ಕದಿಯುವ ವೇಳೆ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಕಳ್ಳರಿಗೆ ಧರ್ಮದೇಟು: ಸಿಟ್ಟಿಗೆದ್ದ ರೈತರು ಕಳ್ಳರನ್ನು ಕಟ್ಟಿಹಾಕಿ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳರನ್ನು ಗುಡಿಬಂಡೆಯ ಪೋಲಿಸರಿಗೆ ಒಪ್ಪಿಸಿದ್ದಾರೆ.