
ದೊಡ್ಡಬಳ್ಳಾಪುರ: ತಾಲೂಕಿನ ಪ್ರಮುಖ ಆಡಳಿತ ಕೇಂದ್ರವಾದ ತಾಲೂಕು ಕಚೇರಿ (Taluk office) ಆವರಣದಲ್ಲಿ ಸ್ವಚ್ಛತೆ ಹೊಂದಿಲ್ಲ ಎಂಬ ಆರೋಪಕ್ಕೆ ಒಳಗಾಗಿದೆ.
ತಾಲೂಕು ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಣದಾಗಿದೆ, ಕಚೇರಿಯ ಸುತ್ತಮುತ್ತ ಪೇಪರ್ ರಾಶಿ, ಕಸಕಡ್ಡಿ ಬಿದ್ದಿದೆಯಾದರೂ ಸ್ವಚ್ಛತೆ ಕಾರ್ಯಕ್ಕೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರತಿನಿತ್ಯ ನಗರಸಭೆಯಿಂದ ನಗರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಆದರೆ ತಾಲೂಕಿನ ಪ್ರಮುಖ ಆಡಳಿತದ ಕೇಂದ್ರದ ಸ್ವಚ್ಛತೆಯನ್ನು ಕಡೆಗಣಿಸಿದೆ ಎಂಬ ಆರೋಪ ವ್ಯಾಪಕವಾಗಿದೆ.
ಸರ್ಕಾರಿ ಕಚೇರಿ ಆವರಣದಲ್ಲಿನ ಸ್ವಚ್ಛತೆ ನೋಡಿ ನಂತರ ಇತರರಿಗೆ ಪಾಠ ಮಾಡಿ
ದೊಡ್ಡಬಳ್ಳಾಪುರ ತಾಲೂಕು ಕಚೇರಿ ಕೇವಲ ತಾಲೂಕು ಆಡಳಿತ ಕೇಂದ್ರವಲ್ಲದೆ. ಉಪವಿಭಾಗಾಧಿಕಾರಿ ಕಚೇಯೂ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲೂಕಿನ ಜನತೆ ಇಲ್ಲಿಗೆ ಭೇಟಿ ನೀಡುತ್ತಾರೆ. ಅದರೆ ಇಲ್ಲಿ ಸ್ವಚ್ಛತೆ ಕೊರತೆ ದೊಡ್ಡಬಳ್ಳಾಪುರ ತಾಲೂಕಿನ ಘನತೆಗೆ ದಕ್ಕೆಯುಂಟುಮಾಡುತ್ತಿದೆ ಎಂದು ಸಾರ್ವಜನಿಕ ಕೀರ್ತಿಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.