
ನವ ದೆಹಲಿ: ರೈಲು ಪ್ರಯಾಣಿಕರ (Train Passengers) ಸರಳ, ಸುರಕ್ಷತೆಗೆ ಕ್ರಮ ಕೈಗೊಳ್ಳದೇ ಓದರು, ರೈಲು ಪ್ರಯಾಣದ ವೇಳೆಯೂ ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಲಗೇಜ್ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwin Vaishnav) ಮಾಹಿತಿ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಅನುಸರಿಸುತ್ತಿರುವ ಪದ್ದತಿಯಂತೆಯೇ ರೈಲು ಪ್ರಯಾಣಿಕರಿಗೂ ಲಗೇಜ್ ನಿಯಮಗಳನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತದೆಯೇ? ಎಂದು ಸಂಸದ ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಪ್ರಸ್ತುತ ಪ್ರಯಾಣಿಕರು ತಮ್ಮೊಂದಿಗೆ ಕಂಪಾರ್ಟ್‌ಮೆಂಟ್‌ಗಳ ಒಳಗೆ ಲಗೇಜ್ ಕೊಂಡೊಯ್ಯಲು ವರ್ಗವಾರು ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ವೈಷ್ಣವ್ ತಿಳಿಸಿದರು.
ಇದರನ್ವಯ ದ್ವಿತೀಯ ದರ್ಜೆಯ ಪ್ರಯಾಣಿಕರು 35 ಕೆ.ಜಿ ಲಗೇಜ್ ಉಚಿತವಾಗಿ ಸಾಗಿಸಬಹುದು. ಇನ್ನು ಶುಲ್ಕ ಪಾವತಿಸಿ ಗರಿಷ್ಠ 70 ಕೆ.ಜಿವರೆಗಿನ ಬ್ಯಾಗೇಜ್ ಕೊಂಡೊಯ್ಯಲು ಅವಕಾಶವಿದೆ.
ಸ್ಲೀಪರ್ ಕೋಚ್ ದರ್ಜೆಯ ಪ್ರಯಾಣಿಕರು 40 ಕೆ.ಜಿವರೆಗೆ ಬ್ಯಾಗ್ ಉಚಿತವಾಗಿ ಸಾಗಿಸಬಹುದಾಗಿದ್ದು, ಶುಲ್ಕ ಪಾವತಿಸಿ ಗರಿಷ್ಠ 80 ಕೆ.ಜಿ ಲಗೇಜ್ ಕೊಂಡೊಯ್ಯಬಹುದಾಗಿದೆ.
ಆದರೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ನೀಡುತ್ತಿರುವ ಸೌಲಭ್ಯ ಯಾವ ರೀತಿ ಇದೆ..? ಮಿತಿ ಮೀರಿದ ಪ್ರಯಾಣಿಕರು, ಸೂಕ್ತ ಸೌಲಭ್ಯ ದೊರಕದೆ ಪರದಾಡುತ್ತಿರುವುದು ಇಲಾಖೆಗೆ ಕಾಣುತ್ತಿಲ್ಲ. ಕೇವಲ ಪ್ರಯಾಣಿಕರ ಮೇಲೆ ಬರೆ ಎಳೆಯುವುದಕ್ಕೆ ಸೀಮಿತವಾಗಿದೆ ಎಂಬ ಆಕ್ರೋಶದ ಮಾತುಗಳು ಕೇಳಿಬಂದಿದೆ.