Protesting injustice is also a duty

Daily story: ಹರಿತಲೇಖನಿ ದಿನಕ್ಕೊಂದು ಕಥೆ: ಅನ್ಯಾಯದ ಪ್ರತಿಭಟನೆಯೂ ಕರ್ತವ್ಯವೇ

Daily story: ಮಾನವನ ಬದುಕಿನಲ್ಲಿ ಅನೇಕ ಬಾರಿ ಅನೇಕ ತರಹದ ಅಪ್ರಿಯ, ಅಸಹ್ಯ ಘಟನೆಗಳು ಜರಗುವುದಿದೆ. ಆಗ ಶಾಂತಿ ಪ್ರೇಮಿಗಳು ಅಂಥ ಪ್ರಸಂಗದಲ್ಲಿ ಅಹಿಂಸಾವಾದಿಗಳಾಗಿ, ಶಾಂತಿಯಿಂದ ಸಹಿಸಿಕೊಳ್ಳಬೇಕು.

ಅಶಾಂತರಾಗಿ ಹಿಂಸಾಪ್ರಿಯರಂತೆ ವಿರೋಧಿಸಬಾರದು ಎಂದು ಅಹಿಂಸಾವಾದಿಗಳು ವಾದಿಸುವುದು, ಉಪದೇಶಿಸುವುದು ಉಂಟು. ಆದರೆ ಹಿಂಸಾ ಪ್ರೇಮಿಗಳ ಅನ್ಯಾಯ, ಅತ್ಯಾಚಾರಗಳನ್ನು ಹೇಗೆ ಮತ್ತು ಏಕೆ ಪ್ರತಿಭಟಿಸಬೇಕೆಂಬುದನ್ನು ನಿರೂಪಿಸುವಂತಹ ಸ್ವಾಮಿ ವಿವೇಕಾನಂದರ ಬದುಕಿನ ಒಂದು ಮಾರ್ಗದರ್ಶಕ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ.

ಇದು ಬ್ರಿಟಿಷ್‌ ಆಡಳಿತ ಕಾಲದ ಪ್ರಸಂಗ ‌ ಸ್ವಾಮಿ ವಿವೇಕಾನಂದರು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ಕುಳಿತಿದ್ದ ಕಂಪಾರ್ಟ್‌ಮೆಂಟ್‌ನಲ್ಲಿ ಒಬ್ಬ ಭಾರತೀಯ ಮಹಿಳೆಯೂ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಳು, ಮುಂದಕ್ಕೆ ಒಂದು ರೈಲ್ವೆ ಸ್ಟೇಶನ್‌ನಲ್ಲಿ ಇಬ್ಬರು ಆಂಗ್ಲ ಅಧಿಕಾರಿಗಳು ಬಂದು ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಎದುರಿನ ಸೀಟಿನಲ್ಲಿ ಕುಳಿತರು.

ಆಂಗ್ಲರ ಆಡಳಿತ ಕಾಲವಾದ್ದರಿಂದ ಭಾರತೀಯರೊಂದಿಗೆ ಅಸಭ್ಯ ವ್ಯವಹಾರ ಮಾಡುವುದು ಸಹಜವೆಂಬಂತೆ ಆ ಮಹಿಳೆಯೆದುರು ವರ್ತಿಸತೊಡಗಿದರು.

ಮೊದಲಿಗೆ ಆ ಮಹಿಳೆಯ ಜತೆಗಿದ್ದ ಮಗುವಿನ ಕಿವಿಯನ್ನು ಹಿಂಡುವುದು, ಕೆನ್ನೆಯನ್ನು ಚಿವುಟುವುದು ಮೊದಲಾದ ಕೀಟಲೆ ಮಾಡತೊಡಗಿದರು ಇದರಿಂದ ಬೇಸರಗೊಂಡ ಮಹಿಳೆಯು ಮುಂದಿನ ಸ್ಟೇಶನ್‌ ಬಂದಾಗ, ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಒಬ್ಬ ಭಾರತೀಯ ಪೊಲೀಸ್‌ ಅಧಿಕಾರಿಗೆ ದೂರು ನೀಡಿದಳು.

ಆ ದೂರಿನಂತೆ ಆ ಪೊಲೀಸ್‌ ಅಧಿಕಾರಿ ಬಂದರೂ ದೂರು ಬ್ರಿಟಿಷರ ವಿರುದ್ಧ ಎಂದು ಗೊತ್ತಾದಾಗ, ಆತ ಏನೂ ಹೇಳದೆ ಹೊರಟು ಹೋದರು ಇದನ್ನು ಕಂಡ ಆ ಆಂಗ್ಲ ಅಧಿಕಾರಿಗಳು ಮತ್ತೆ ಕೀಟಲೆ ಆರಂಭಿಸಿದರು.

ಇದೆಲ್ಲವನ್ನೂ ಬಹು ಹೊತ್ತಿನಿಂದ ಗಮನಿಸುತ್ತಿದ್ದ ವಿವೇಕಾನಂದರು ಈ ಆಂಗ್ಲ ಅಧಿಕಾರಿಗಳಿಗೆ ಸೂಕ್ತ ಪಾಠ ಕಲಿಸಬೇಕೆಂದು ನಿರ್ಧರಿಸಿದರು ತಕ್ಷಣ ತಾವು ಕುಳಿತಲ್ಲಿಂದ ಎದ್ದು, ಆಂಗ್ಲ ಅಧಿಕಾರಿಗಳ ಎದುರುಗಡೆ ನಿಂತುಬಿಟ್ಟರು.

ಅವರ ಬಲಿಷ್ಠ ಕಾಯವನ್ನು ವೀಕ್ಷಿಸಿದ ಆಂಗ್ಲರು ಗಾಬರಿಯಾದರು ಮೊದಲಿಗೆ ವಿವೇಕಾನಂದರು ಅವರಿಬ್ಬರ ಕಣ್ಣುಗಳನ್ನು ದಿಟ್ಟಿಸಿ ನೋಡಿದರು. ಬಳಿಕ ಎಡಗೈಯ ಶರ್ಟ್‌ನ ತೋಳನ್ನು ಮೇಲಕ್ಕೆ ಸರಿಸಿದರು ಮತ್ತು ಕೈಯನ್ನು ತಿರುಗಿಸಿ ಅವರಿಗೆ ತಮ್ಮ ಬಾಹುಗಳ ಸುಪುಷ್ಟವೂ, ಬಲಿಷ್ಠವೂ ಆದ ಮಾಂಸ ಖಂಡಗಳನ್ನು ತೋರಿಸಿದರು.

ಸ್ವಾಮಿ ವಿವೇಕಾನಂದರ ಈ ನಡವಳಿಕೆಯನ್ನು ಕಂಡು ಇಬ್ಬರೂ ಆಂಗ್ಲ ಅಧಿಕಾರಿಗಳು ಗಾಬರಿಯಾದರು ಮತ್ತು ಮುಂದಿನ ಸ್ಟೇಶನ್‌ ಬಂದೊಡನೆ ಇಳಿದು ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಹತ್ತಿಕೊಂಡರು.

ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ, ಹಿರಿಮೆ, ಗರಿಮೆಗಳನ್ನು ಅರಿತಿದ್ದ ಧೀಮಂತ ಪುರುಷರಾಗಿದ್ದು ತಮ್ಮ ಪ್ರವಚನಗಳಲ್ಲಿ ಈ ಉದಾಹರಣೆಯನ್ನು ನೀಡುತ್ತಿದ್ದರು.

ಅವರು ಹಿಂಸೆಯ ಪರವಾಗಿರಲಿಲ್ಲ ಆದರೆ ಹಿಂಸಾತ್ಮಕವಾಗಿರುವವರನ್ನು ಎದುರಿಸಲು ಕೆಲವೊಮ್ಮೆ ದೃಢವಾದ ಶಾರೀರಿಕ ನಿಲುವುಗಳೇ ಬೇಕು.

ದೃಢವಾದ ದೇಹವನ್ನೂ ವಿವೇಕಯುತವಾದ ಪ್ರಜ್ಞೆಯನ್ನೂ ಸ್ವಾಮಿ ವಿವೇಕಾನಂದರು ಪ್ರತಿಪಾದಿಸುತ್ತಿದ್ದರು ನಾವು ಅನ್ಯಾಯವನ್ನು ಪ್ರತಿಭಟಿಸದೆ, ಸಹಿಸುತ್ತಾ ಮುನ್ನಡೆದರೆ ಅನ್ಯಾಯ ಮಾಡುವವರು ಮತ್ತಷ್ಟು ಬಲಿಷ್ಠರಾಗುತ್ತಾರೆ.

ಆದ್ದರಿಂದ ಅಧರ್ಮ, ಅನೀತಿ, ಅನ್ಯಾಯ ಮಾಡುವವರನ್ನು ಪ್ರತಿಭಟಿಸುವುದೂ ಕೂಡ ನ್ಯಾಯ, ನೀತಿ, ಧರ್ಮಗಳ ರಕ್ಷಣೆಯೇ ಆಗಿದೆ ಎಂಬುದನ್ನು ಮರೆಯುವಂತಿಲ್ಲ.

ಕೃಪೆ: ಸಾಮಾಜಿಕತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!