Daily story| ಹರಿತಲೇಖನಿ ದಿನಕ್ಕೊಂದು ಕಥೆ: ಆದರ್ಶ ಮಿತ್ರಪ್ರೇಮ

Ideal friendship

Daily story: ಕಂಬನ ತಮಿಳುನಾಡಿನ ಪ್ರತಿಭಾವಂತ ಹಾಗೂ ಸೂಕ್ಷ್ಮದರ್ಶಿ ಮಹಾಕವಿಯಾಗಿದ್ದನು. ಅವನಿಗೆ ಓಟುಕ್ಕುತ್ತನ ಎಂಬ ಹೆಸರಿನ ಮಿತ್ರನಿದ್ದನು. ಅವನೂ ಮಹಾನ ವಿದ್ವಾಂಸನಾಗಿದ್ದನು.

ಕಂಬನನು ರಾಮಾಯಣವನ್ನು ರಚಿಸುತ್ತಿರುವುದರ ಬಗ್ಗೆ ತಿಳಿದಾಗ ಓಟುಕ್ಕುತ್ತರಗೂ ಸ್ಪೂರ್ತಿ ಬಂದು ಅವನೂ ತಮಿಳಿನಲ್ಲಿ ರಾಮಾಯಣ ರಚನೆಯನ್ನು ಆರಂಭಿಸಿದನು. ಇಬ್ಬರ ರಾಮಾಯಣವು ಸ್ವತಂತ್ರವಾಗಿ ಆರಂಭವಾಗಿ ಕಾಲಾನುಸಾರವಾಗಿ ಪೂರ್ಣವಾಯಿತು.

ಕಂಬನನ ರಾಮಾಯಣವು ಜನಪ್ರಿಯವಾಯಿತು. ಕಂಬನನು ತನ್ನ ರಾಮಾಯಣವನ್ನು ಹಾಡಿದರೆ ಶ್ರೋತೃಗಳು ತಲ್ಲೀನರಾಗಿ ವಾಹ್ ವಾಹ್ ಎಂದು ಹೇಳುತ್ತಿದ್ದರು. ಕಂಬನನು ಹೋದಲ್ಲಿ ಅವನ ಆದರ, ಸನ್ಮಾನವಾಗುತ್ತಿತ್ತು. ಎಲ್ಲಕಡೆಯೂ ಅವನ ಜಯಕಾರವಾಗುತ್ತಿತ್ತು.

ಓಟುಕ್ಕುತ್ತರತನ್ನ ರಾಮಾಯಣವನ್ನು ಓದಲು ಕುಳಿತಾಗ ನಗಣ್ಯ ಶ್ರೋತೃಗಳಿರುತ್ತಿದ್ದರು. ಇದರಿಂದಾಗಿ ಓಟುಕ್ಕುತ್ತರನಿರಾಶೆಗೊಳ್ಳುತ್ತಿದ್ದನು. ಅವನಿಗೆ ತನ್ನ ಎಲ್ಲ ಶ್ರಮವೂ ವ್ಯರ್ಥವಾಯಿತು ಎಂದು ಅನಿಸುತ್ತಿತ್ತು.

ತಾನು ಅಪೇಕ್ಷಿತ ರೀತಿಯಲ್ಲಿ ಜೀವಿಸಿ ಮರಣ ಹೊಂದುವೆನು ಎಂದು ವಿಚಾರ ಮಾಡಿ ಮಾಡಿ ಅವನಿಗೆ ಹಿಂಸೆಯಾಗುತ್ತಿತ್ತು. ಅವನ ಜೀವನದಲ್ಲಿ ಎಲ್ಲೆಡೆಯೂ ಅಂಧಕಾರ ಪಸರಿಸಿತು.

ಕೊನೆಗೆ ಒಂದು ದಿನ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಟ್ಟು ಆ ರಾಮಾಯಣದ ಬೂದಿಯನ್ನು ಬಳಿದುಕೊಂಡು ಗೋಸಾವಿಯಾಗಬೇಕೆಂದು ನಿರ್ಧರಿಸಿದನು.

ಈ ಕೆಟ್ಟ ವಿಷಯವು ಕಂಬನನ ಕಿವಿಗೆ ಬಿತ್ತು. ಅವನು ಧಾವಿಸಿ ಮಿತ್ರನ ಬಳಿ ಹೋದನು. ಅವನು ನೋಡಿದಾಗ ಓಟುಕ್ಕುತ್ತರತಾನು ರಚಿಸಿದ ರಾಮಾಯಣವನ್ನು ಸುಡುತ್ತಿದ್ದನು.

ಕಂಬನನು ‘ಅರೆ, ಹುಚ್ಚ ಏನು ಮಾಡುತ್ತಿರುವೆ ? ನೀನೇ ರಚಿಸಿರುವ ರಾಮಾಯಣವನ್ನು ಏಕೆ ಸುಡುತ್ತಿರುವೆ ?’ಎಂದು ಕೇಳಿದನು. ಅದಕ್ಕೆ ಓಟುಕ್ಕುತ್ತರ’ನಿನ್ನ ಮುಂದೆ ನಾನು ಒಂದು ಮಿಂಚು ಹುಳುವಾಗಿದ್ದೇನೆ, ನನ್ನ ರಾಮಾಯಣವನ್ನು ಯಾರೂ ಕೇಳುವುದಿಲ್ಲ.

ಅದು ಧೂಳು ಹಿಡಿದು ಬಿದ್ದಿರುವುದಕ್ಕಿಂತಲೂ ಸುಟ್ಟು ಹೋದರೆ ಒಳ್ಳೆಯದು’ಎಂದು ಹೇಳಿದನು. ಕಂಬನನು ಓಟುಕ್ಕುತ್ತರ ಕೈಹಿಡಿದನು. ಆಗ ಓಟುಕ್ಕುತ್ತರ ರಾಮಾಯಣದಲ್ಲಿನ ಬೆಂಕಿಯಿಂದ ಸುಡದೇ ಉಳಿದ ಉತ್ತರಕಾಂಡವನ್ನು ಕಂಬನನು ತೆಗೆದುಕೊಂಡನು.

ಕಂಬನನು ಓಟುಕ್ಕುತ್ತರಗೆ ‘ಹುಚ್ಚ, ನೀನು ನನ್ನ ಮಿತ್ರನಲ್ಲವೇ ! ಈ ಸ್ವಾಹಾಕಾರವನ್ನು ಮಾಡುವ ಮೊದಲು ನನಗೆ ಹೇಳಬೇಕಿತ್ತಲ್ಲವೇ ! ಈಗ ನಾನು ಹೇಳುವುದನ್ನು ಕೇಳು. ನಿನ್ನ ರಾಮಾಯಣವು ಪೂರ್ಣವಾಗಿದೆ.

ನನ್ನ ರಾಮಾಯಣದ ಉತ್ತರಕಾಂಡವು ಪೂರ್ಣವಾಗಬೇಕಿದೆ. ಈಗ ನಾನು ಅದನ್ನು ರಚಿಸುವುದಿಲ್ಲ. ನನ್ನ ರಾಮಾಯಣಕ್ಕೆ ನಿನ್ನ ಈ ಉತ್ತರಕಾಂಡವನ್ನು ಜೋಡಿಸುತ್ತೇನೆ, ಅಂದರೆ ರಾಮಾಯಣವು ಪೂರ್ಣವಾಗುತ್ತದೆ.

ಜನರು ನಮ್ಮಿಬ್ಬರನ್ನೂ ರಾಮಾಯಣ ಕರ್ತರೆಂದು ಗುರುತಿಸುತ್ತಾರೆ!. ಇದು ಮಿತ್ರಪ್ರೇಮದ ಆದರ್ಶವಾಗುವುದು !’ ಎಂದು ಹೇಳಿದನು.

ಆಧಾರ: ಸಾಪ್ತಾಹಿಕ ಜಯ ಹನುಮಾನ (ಕೃಪೆ: ಹಿಂದೂ ಜಾಗೃತಿ)

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]