ಬೆಂಗಳೂರು (Prakash raj): ಪ್ರಯೋಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಮಂದಿ ಭಾಗಿಯಾಗಿ, ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.
ಆದರೆ ನಟ ಪ್ರಕಾಶ್ ರಾಜ್ ((Prakash raj) ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವಂತೆ ನಕಲಿ ಪೋಟೋ ಬಳಸಿರುವ ತಮ್ಮ ಫೇಕ್ ಫೋಟೋ ಒಂದನ್ನು ನೋಡಿ ಕೆರಳಿದ್ದಾರೆ.
ಪ್ರಯಾಗರಾಜ್ ನ ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂದು ಪ್ರಶಾಂತ್ ಸಂಬರಗಿ ಎಂಬ ಅಕೌಂಟ್ ನಲ್ಲಿ ನಟ ಪ್ರಕಾಶ್ ರಾಜ್ ನದಿಯಲ್ಲಿ ಕೈ ಮುಗಿಯುತ್ತಿರುವ ಫೋಟೊವನ್ನು ಹಂಚಿಕೊಳ್ಳಲಾಗಿದೆ.
ಸುಳ್ಳು ಸುದ್ದಿ
— Prakash Raj (@prakashraaj) January 28, 2025
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ 😊 #justasking pic.twitter.com/S6ySeyFKmh
ಈ ಬಗ್ಗೆ ಫೋಟೋ ಸಮೇತ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್, ಇದು ನಕಲಿ ಪೋಟೋ ಎಂದು ಸ್ಪಷ್ಟಪಡಿಸಿದ್ದಾರೆ.
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ.. ಪೊಲೀಸ್ ದೂರು ದಾಖಲಾಗಿದೆ.. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ’ ಎಂದು ಪ್ರಕಾಶ್ ರಾಜ್ ಬರೆದು ಕಿಡಿಕಾರಿದ್ದಾರೆ.