ನವದೆಹಲಿ: ಪುಲ್ವಾಮ ಉಗ್ರರ ದಾಳಿ (PulwamaTerrorAttack) ನಡೆದು ಇಂದಿಗೆ ಆರು ವರ್ಷ, ಈ ಆ ಕರಾಳ ಘಟನೆಯಲ್ಲಿ ಉಗ್ರರದಾಳಿಗೆ ಭಾರತಾಂಬೆಯ ಹೆಮ್ಮೆಯ ಸೈನಿಕರು ಹುತಾತ್ಮರಾಗಿದ್ದರು.
2019ರ ಫೆಬ್ರವರಿ 14 ರಂದು ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನ ಉಗ್ರರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದರು. ಘಟನೆಯಲ್ಲಿ ಉಗ್ರರದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.
ಇಂದು ದೇಶಾದ್ಯಂತ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಈ ಗೌರವ ಸಲ್ಲಿಸಲಾಗುತ್ತಿದ್ದು, ಈ ಭಯಾನಕ ಘಟನೆಯ ನೆನಪು ಮಾತ್ರ ಇನ್ನು ಮಾಸಿಲ್ಲ.
ಸರಿಯಾಗಿ ಆರು ವರ್ಷಗಳ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ಜೈಕ್ ಇ ಮೊಹಮ್ಮದ್‌ಇಎಂಬ ಸಂಘಟನೆಯ ಉಗ್ರಗಾಮಿಗಳನ್ನು ಮತ್ತು ಸ್ಫೋಟಕಗಳನ್ನು ಹೊತ್ತ ವಾಹನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಸಿಆರ್ ಪಿಎಫ್‌ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು.
ಜೈಷ್ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಯೋಧರ ಬೆಂಗಾವಲು ವಾಹನದ ಮೇಲೆ ಡಿಕ್ಕಿ ಹೊಡೆದಾಗ ಸುಮಾರು ಸುಮಾರು 40 ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು.
ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಈ ಭೀಕರ ದಾಳಿಗೆ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗಿತ್ತು.
ಪ್ರತೀಕಾರ
ಇನ್ನು ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು 2019ರ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತು.
12 ಮಿರಾಜ್- 2000 ಫೈಟರ್ ಜೆಟ್‌ಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. 350 ಉಗ್ರರ ಶಿಬಿರಗಳನ್ನು ಪುಡಿಗಟ್ಟಲಾಗಿತ್ತು.
ಸಂಚುಕೋರರು ಸಿಕ್ಕಿಲ್ಲ
ದಾಳಿ ನಡೆದು ಆರು ವರ್ಷಗಳು ಕಳೆದರೂ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸೇರಿದಂತೆ ಪ್ರಮುಖ ಸಂಚುಕೋರರು ಇಲ್ಲಿಯವರೆಗೂ ಸಿಕ್ಕಿಲ್ಲ. ಅಲ್ಲದೆ ಅಷ್ಟು ದೊಡ್ಡ ಪ್ರಮಾಣದ ಸ್ಪೋಟಕ ದೇಶದ ಒಳಗೆ ಹೇಗೆ ಬಂತು ಎಂಬುದಕ್ಕೆ ಉತ್ತರಕೂಡ ಸಿಕ್ಕಿಲ್ಲ.
ಈ ದುಷ್ಕೃತ್ಯವೆಸಗಿದ ಪಾಪಿಗಳನ್ನು ನಮ್ಮ ವಶಕ್ಕೆ ಒಪ್ಪಿಸಿ ಎಂದು ಭಾರತ ಬರೆದಿದ್ದರೂ, ಪಾಕಿಸ್ತಾನ ಮಾತ್ರ ಯಾವ ಪತ್ರಗಳಿಗೆ ಉತ್ತರಿಸುವ ಗೋಜಿಗೂ ಹೋಗಿಗಿಲ್ಲ.
ಈ ದಾಳಿಯಲ್ಲಿ ಭಾಗಿಯಾದ 19 ಉಗ್ರರ ಪೈಕಿ 15 ಮಂದಿಯನ್ನು ವಿವಿಧ ಕಾರ್ತಾಚರಣೆಗಳ ಸಂದರ್ಭದಲ್ಲಿ ಬಂಧಿಸಲಾಗಿದೆ. ಇಲ್ಲವೇ ಹತ್ಯೆ ಮಾಡಲಾಗಿದೆ.
ಆಜರ್, ಆತನ ಸಹೋದರ ರಾವುಫ್ ಅಸ್ಕರ್ ಮತ್ತು ಅವನ ಸಂಬಂಧಿ ಅಮ್ಮರ್ ಅಲ್ಲಿ ತಲೆಮರೆಸಿಕೊಂಡಿದ್ದಾರೆ.