Daily story: Victory

ಹರಿತಲೇಖನಿ ದಿನಕ್ಕೊಂದು ಕಥೆ: ಗೆಲುವು

Daily story: ಸಣ್ಣ ದೇಶಕ್ಕೆ ಒಬ್ಬ ಒಳ್ಳೆಯ ದೊರೆಯಿದ್ದ. ಅವನೆಂದಿಗೂ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಲಿಲ್ಲ. ಬದಲಾಗಿ ನೊಂದವರ ಬಳಿಗೆ ಹೋಗಿ ಕಣ್ಣೀರೊರೆಸಿದ.

ಸೋತವರಿಗೆ ನೆರವು ನೀಡಿದ. ಅಸಹಾಯಕರ ಸೇವೆ ಮಾಡಿದ. ಎಲ್ಲರೂ ತನ್ನ ಸಮಾನರೆಂದು ತಿಳಿದ. ಪ್ರಜೆಗಳು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಅವನ ಮೇಲೆ ಪ್ರೀತಿಯಿಟ್ಟರು.

ಒಂದು ಸಲ ಚಕ್ರವರ್ತಿ ಆ ದೇಶದ ಬಳಿಗೆ ಕಾರ್ಯ ನಿಮಿತ್ತ ಬಂದ. ತನ್ನನ್ನು ಭೇಟಿಯಾಗುವಂತೆ ದೊರೆಗೆ ಭಟರ ಮೂಲಕ ಕರೆ ಕಳುಹಿಸಿದ.

ಆಗ ದೊರೆ ಒಬ್ಬ ರೋಗಿಷ್ಠನ ಮನೆಗೆ ಬಂದು ಅವನ ಶುಶ್ರೂಷೆ ಮಾಡುವುದರಲ್ಲಿ ನಿರತನಾಗಿದ್ದ. ಭಟರು ‘ಕೂಡಲೇ ಬಂದು ಭೇಟಿಯಾಗಬೇಕೆಂದು ಚಕ್ರವರ್ತಿಗಳು ಕರೆ ಕಳುಹಿಸಿದ್ದಾರೆ ಬನ್ನಿ’ ಎಂದರು.

ದೊರೆ ವಿನೀತನಾಗಿ ‘ಕಷ್ಟದಲ್ಲಿರುವ ಪ್ರಜೆಯೊಬ್ಬನಿಗೆ ನೆರವಾಗುವ ಕೆಲಸದಲ್ಲಿದ್ದೇನೆ. ಇದು ಮುಗಿದ ಕೂಡಲೇ ಬರುವುದಾಗಿ ಹೇಳಿ’ ಎಂದು ತಿಳಿಸಿದ.

ಈ ಮಾತಿನಿಂದ ಚಕ್ರವರ್ತಿಗೆ ಅಸಾಧ್ಯ ಕೋಪ ಬಂತು. ‘ಏನಿದು? ಒಬ್ಬ ಸಣ್ಣ ರಾಜನಿಗೆ ಚಕ್ರವರ್ತಿಯ ಆಜ್ಞೆಯನ್ನು ಧಿಕ್ಕರಿಸುವಂಥ ಪೊಗರೇ? ತಕ್ಷ ಣ ಈ ರಾಜ್ಯದ ಮೇಲೆ ಯುದ್ಧ ಸಾರಿ. ಅವನನ್ನು ಸದೆ ಬಡಿಯಿರಿ’ ಎಂದು ಮಂತ್ರಿಗಳಿಗೆ ಆಜ್ಞಾಪಿಸಿದ.

ದೊರೆಗೆ ಯುದ್ಧದ ವರ್ತಮಾನ ತಲುಪಿತು. ಮಂತ್ರಿಗಳು ಯುದ್ಧದ ಸಿದ್ಧತೆಗೆ ಮುಂದಾದರು. ಆದರೆ ದೊರೆ ಒಪ್ಪಲಿಲ್ಲ. ‘ಯುದ್ಧ ಮಾಡಿದರೆ ನೂರಾರು ಮಂದಿಯ ಸಾವು ನಿಶ್ಚಿತ. ಅದರ ಬದಲು ರಾಜ್ಯವನ್ನು ಚಕ್ರವರ್ತಿಗೆ ಒಪ್ಪಿಸಿದರೆ ಎಲ್ಲರೂ ಬದುಕುತ್ತಾರೆ’ ಎಂದು ನಿರ್ಧರಿಸಿ ಚಕ್ರವರ್ತಿಯ ಭೇಟಿಗೆ ಸಿದ್ಧನಾದ.

ದೊರೆ ಒಬ್ಬ ಸೇವಕನ ಜೊತೆಗೆ ಕುದುರೆಯ ಮೇಲೆ ಕುಳಿತುಕೊಂಡು ಚಕ್ರವರ್ತಿಯ ಬಳಿಗೆ ಹೊರಟ. ಕಡು ಬಿಸಿಲಿಗೆ ಕಾಲು ಸುಡುತ್ತಿತ್ತು.

ತಾನು ಕುದುರೆಯ ಮೇಲೆ ಸಾಗುವಾಗ ಸೇವಕ ಕುದುರೆಯ ಹಗ್ಗ ಹಿಡಿದುಕೊಂಡು ನಡೆದು ಬರುತ್ತಿದ್ದ. ಅವನು ನಡೆಯಲಾಗದೆ ಕಷ್ಟಪಡುತ್ತಿದ್ದ. ಅವನಿಗೆ ಆಯಾಸವಾಗುತ್ತಿದೆಯೆಂದು ದೊರೆಗೆ ಅರ್ಥವಾಯಿತು.

ಕುದುರೆಯ ಮೇಲಿಂದ ಕೆಳಗಿಳಿದ. ಸೇವಕನನ್ನು ಕರೆದು ‘ನೀನು ತುಂಬ ಬಳಲಿದ್ದಿ. ನೀನೀಗ ಕುದುರೆ ಮೇಲೆ ಕುಳಿತುಕೋ. ನಾನು ಸ್ವಲ್ಪ ದೂರ ಹಗ್ಗ ಹಿಡಿದುಕೊಂಡು ನಡೆದು ಬರುತ್ತೇನೆ.

ನಿನ್ನ ಬಳಲಿಕೆ ತೀರಿದ ಮೇಲೆ ನಾನು ಕುಳಿತುಕೊಳ್ಳುತ್ತೇನೆ. ನಾವಿಬ್ಬರೂ ಹೀಗೆ ಸರದಿ ಬದಲಾಯಿಸಿಕೊಂಡು ಮುಂದೆ ಸಾಗೋಣ’ ಎಂದ.

ಸೇವಕ ಗಾಬರಿಯಿಂದ ‘ಎಲ್ಲಾದರೂ ಉಂಟೇ? ನೀವು ನಡೆದು ನಾನು ಕುದುರೆಯ ಮೇಲೇರುವುದೆ!’ ಎಂದು ದೂರ ನಿಂತ. ಆದರೆ ದೊರೆ ಒತ್ತಾಯದಿಂದ ಅವನನ್ನೂ ಕುದುರೆಯಲ್ಲಿ ಕೂಡಿಸಿ ಮುಂದೆ ಸಾಗಿದ.

ಒಮ್ಮೆ ಸೇವಕ, ಒಮ್ಮೆ ತಾನು ಕುದುರೆಯ ಮೇಲೇರುತ್ತ ಕಡೆಗೂ ಚಕ್ರವರ್ತಿಯ ಶಿಬಿರ ತಲಪಿದ. ಆಗ ಸೇವಕ ಕುದುರೆಯ ಮೇಲಿದ್ದ. ಅವನನ್ನೇ ದೊರೆಯೆಂದು ಭಾವಿಸಿ ಮಾತನಾಡಿಸಲು ಬಂದ ಚಕ್ರವರ್ತಿಯ ಬಳಿ ಸೇವಕ ಕುದುರೆಯಿಂದ ಕೆಳಗಿಳಿದು ಕೈ ಜೋಡಿಸಿ ‘ದೊರೆಗಳು ಅವರು! ನಾನು ಸೇವಕ’ ಎಂದು ವಿನಯದಿಂದ ಹೇಳಿದ.

ಚಕ್ರವರ್ತಿ ನಡೆದ ವಿಷಯ ತಿಳಿದುಕೊಂಡ. ಮರುಕ್ಷ ಣವೇ ಪಶ್ಚಾತ್ತಾಪದಿಂದ ತಲೆ ತಗ್ಗಿಸಿದ. ‘ಛೇ! ಸೇವಕನನ್ನೂ ತನ್ನ ಸಮಾನನೆಂದು ಭಾವಿಸಿ ಕುದುರೆಯ ಮೇಲೆ ಕರೆ ತರುವ ದೊರೆ ಈ ಭರತಖಂಡದಲ್ಲೇ ಇರಲಿಕ್ಕಿಲ್ಲ.

ಇಂತಹವನೊಂದಿಗೆ ಯುದ್ಧವೆಸಗಿದರೆ ಪ್ರಜೆಗಳು ದಂಗೆಯೆದ್ದು ನನ್ನನ್ನೇ ಕೊಂದಾರು. ಋುಷಿ ಸದೃಶನಾದ ದೊರೆಯ ರಾಜ್ಯವನ್ನು ಸ್ವತಂತ್ರಗೊಳಿಸುತ್ತೇನೆ’ ಎಂದ ಹೇಳಿದ.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!