ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಕಸಬಾ ಹೋಬಳಿ ಮರಳೇನಹಳ್ಳಿಯಲ್ಲಿ (ಶ್ರೀ ಶಿವರಂಗನಾಥಸ್ವಾಮಿ ಕ್ಷೇತ್ರ) ದಿನ್ನೆ ಬಸವಣ್ಣ ದೇವರ 11ನೇ ವರ್ಷದ ರಥೋತ್ಸವ ಹಾಗೂ ಹೂವಿನ ಆರತಿ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನಡೆಯಿತು.
ದಿನ್ನೆ ಬಸವಣ್ಣ ದೇವರ ಭವ್ಯ ಅಲಂಕೃತ ರಥೋತ್ಸವದಲ್ಲಿ ಮಹಿಳೆಯರು ವಿವಿಧ ಬಗೆಯ ಆರತಿಗಳನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದರು.
ಆರತಿಗಳೊಂದಿಗೆ ಮಂಗಳವಾದ್ಯ, ತಮಟೆ ಹಾಗೂ ವಿವಿಧ ಕಲಾತಂಡಗಳೊಂದಿಗೆ ದಿನ್ನೆಬಸವಣ್ಣ ದೇವಸ್ಥಾನಕ್ಕೆ ತಲುಪಲಾಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು.
ರಥೋತ್ಸವ ಹಾಗೂ ಆರತಿ ಕಾರ್ಯಕ್ರಮದಲ್ಲಿ ತಾಲೂಕಿನ ಮರಳೇನಹಳ್ಳಿ, ಶ್ರೀನಿವಾಸಪುರ, ಹೊನ್ನಾಘಟ್ಟ, ತಳಗವಾರ, ನೇರಳೆ ಘಟ್ಟ, ಕೊಡಿಗೆಹಳ್ಳಿ, ಕೋಳೂರು, ಹಣಬೆ, ಸೋಮಶೆಟ್ಟಿಹಳ್ಳಿ, ಶಿರವಾರ, ತಿಪ್ಪೂರು ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ದೊಡ್ಡಬಳ್ಳಾಪುರ ನಗರದಿಂದ ಭಕ್ತಾದಿಗಳು ಭಾಗವಹಿಸಿದ್ದರು.
ವಿವಿಧ ಅರವಂಟಿಗೆ ಮಂಡಲಿಗಳಿಂದ ಜಾತ್ರೆಗೆ ಆಗಮಿಸಿದ್ದವರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.