ಚಿಕ್ಕಬಳ್ಳಾಪುರ (Harithalekhani): ತಾಲ್ಲೂಕಿನ ಸೂಲಕುಂಟೆ ಗ್ರಾಮದ ನಿವಾಸಿ ಬಿ.ಎಸ್.ಲಕ್ಷ್ಮೀ (Lakshmi) ಎಂಬ 20 ವರ್ಷದ ಯುವತಿ ಏಪ್ರಿಲ್ 14 ರಂದು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮೊಬೈಲ್ ನ್ನು ಮನೆಯಲ್ಲಿಯೆ ಬಿಟ್ಟು ಹೊರಗಡೆ ಹೊರಟು ಹೋಗಿರುತ್ತಾರೆ.
ಮನೆಯ ಸುತ್ತಮುತ್ತ, ನೆಂಟರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಕಾರಣ ಪತ್ತೆ ಮಾಡಿಕೊಡಬೇಕೆಂದು ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಚಹರೆ: 20 ವರ್ಷ ವಯಸ್ಸು, 5 ಅಡಿ ಎತ್ತರ, ಹಕ್ಕಿಪಿಕ್ಕಿ ಜನಾಂಗ. ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಚೂಡಿದಾರ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಯುವತಿಯ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.