ದೊಡ್ಡಬಳ್ಳಾಪುರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ (terrorist attack) ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ, ಮುಸ್ಲಿಂ ಯೂತ್ ಅಸೋಸಿಯೇಷನ್ ವತಿಯಿಂದ ಮೊಂಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಲಾಯಿತು.
ನಗರದ ಸಿದ್ದಲಿಂಗಗಯ್ಯ ವೃತ್ತದಿಂದ ಮೊಂಬತ್ತಿ ಬೆಳಗುವ ಮೂಲಕ ಆರಂಭವಾದ ಮೌನ ಮೆರವಣಿಗೆ, ಗಾಂಧಿ ಚೌಕಕ್ಕೆ ಬಂದು ಸಂತಾಪ ಸಭೆಯನ್ನು ನಡೆಸಲಾಯಿತು.
ಈ ವೇಳೆ ಎರಡು ಸಂಘಟನೆ ಮುಖಂಡರಾದ ಪು.ಮಹೇಶ್, ಹಮಾಮ್ ವೆಂಕಟೇಶ್, ಜೋಗಳ್ಳಿ ಅಮ್ಮು, ಬಶೀರ್, ರವಿ, ಮಂಜುನಾಥ್ ಮುನಿಕೃಷ್ಣಪ್ಪ, ಅಬ್ದುಲ್ ರೌಫ್ ಆಜಾಮ್ ಹಿನಾಯ್, ಶಿರಾಜ್‌ಇರ್ಫಾನ್, ಇಮ್ರಾನ್ ವಾಸಿಂ, ಶಕೂರ್ ಇದ್ದರು.