ದೊಡ್ಡಬಳ್ಳಾಪುರ: ನಗರದ ವೀರಭದ್ರನ ಪಾಳ್ಯದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ದುರ್ಗಮ್ಮ ದೇವಿ ಮತ್ತು ಶ್ರೀ ದುಗ್ಲಮ್ಮ ದೇವಿ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಟಾಪನೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮ ಶ್ರೀ ದುರ್ಗಮ್ಮ ದೇವಿ ಮತ್ತು ಶ್ರೀ ದುಗ್ಲಮ್ಮ ದೇವಿ ದೇವಾಲಯ ಅಭಿವೃದ್ದಿ ಮಂಡಲಿ ಟ್ರಸ್ಟ್ ನೇತೃತ್ವದಲ್ಲಿ ಶ್ರದ್ಧಾಭಕ್ತಿ ಸಂಭ್ರಮಗಳಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ, ಕಲಶ ಪೂಜೆ, ವಾಸ್ತು ಹೋಮ, ಬಲಿ ಪೂಜೆ, ನವಗ್ರಹ ಹೋಮ, ಪೂರ್ಣಹುತಿ ಮತ್ತು ಮಹಾಮಂಗಳಾರತಿ ನಡೆಯಿತು.

ಶುಕ್ರವಾರದಂದು ಬೆಳಗಿನ ಜಾವ ದೇವತಾ ಮೂರ್ತಿಗಳ ಪ್ರತಿಷ್ಟಾಪನೆ, ನೇತ್ರೋನ್ಮಿಲನ, ದೇವತಾ ನಾಮಕರಣ, ತತ್ವ ಹೋಮ, ಕಳಾ ಹೋಮ, ಮೂಲ ಶಕ್ತಿ ದೇವತಾ ಹೋಮ, ಮಹಾಕುಂಭಾಭಿಷೇಕ ನಡೆಯಿತು. ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.
ಶ್ರೀ ದುರ್ಗಮ್ಮ ದೇವಿ ಮತ್ತು ಶ್ರೀ ದುಗ್ಲಮ್ಮ ದೇವಿ ದೇವಾಲಯ ಅಭಿವೃದ್ದಿ ಮಂಡಲಿ ಟ್ರಸ್ಟ್ ನ ಪದಾಧಿಕಾರಿಗಳು, ವೀರಭದ್ರನ ಪಾಳ್ಯ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
