ದೊಡ್ಡಬಳ್ಳಾಪುರ: ಶನೇಶ್ಚರ ಜಯಂತಿ ಅಂಗವಾಗಿ ಘಾಟಿ ಸುಬ್ರಹ್ಮಣ್ಯ ಸಮೀಪದ ಬಂಡೇಪಾಳ್ಯ ಕೆಳಗಿನ ಜೂಗಾನಹಳ್ಳಿಯಲ್ಲಿರುವ ಶ್ರೀ ದೇವರ ಬೆಟ್ಟದಲ್ಲಿ ಶ್ರೀ ವಿಶ್ವ ಶನೇಶ್ಚರ ಸ್ವಾಮಿಯ (Vishwa Shaneshwaraswamy) ಬ್ರಹ್ಮರಥೋತ್ಸವ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನಡೆಯಿತು.
ಭಕ್ತರು ಬಾಳೆಹಣ್ಣು, ದವನ ಅರ್ಪಿಸಿ ಧನ್ಯತೆ ಮೆರೆದರು.
ಬ್ರಹ್ಮರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದ ಅಭಿಷೇಕ, ಅರ್ಚನೆ, ಹೋಮ ನೆರವೇರಿಸಲಾಯಿತು. ಶನೇಶ್ವರ ಸ್ವಾಮಿಯನ್ನು ದೇವಾಲಯದಿಂದ ತಂದು ಪಂಚ ಕಳಸದೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.
ಮಧ್ಯಾಹ್ನ 2 ಗಂಟೆಗೆ ರಥೋತ್ಸವ ಜರುಗಿತು.
ಬ್ರಹ್ಮ ರಥೋತ್ಸವಕ್ಕು ಮುನ್ನ ಕ್ಷೇತ್ರದಲ್ಲಿ ಅಭಿಷೇಕ, ಅಂಕುರಾರ್ಪಣೆ,ಕಳಶ ಸ್ಥಾಪನೆ, ಯಾಗಶಾಲಾ ಪ್ರವೇಶ, ಮೃತ್ಸಂಗ್ರಹಣ, ಅಷ್ಟವದಾನ, ನಡೆಸಲಾಯಿತು.
ಬ್ರಹ್ಮ ರಥೋತ್ಸವದಂದು ಅಭಿಷೇಕ, ಜ್ಯೇಷ್ಠದೇವಿ ನೀಲಾದೇವಿ ಸಮೇತ ಶ್ರೀ ವಿಶ್ವಶನೇಶ್ಚರ ಸ್ವಾಮಿಯ ಕಲ್ಯಾಣೋತ್ಸವ, ಹಾಗೂ ಸಂಜೆ ವಸಂತೋತ್ಸವ, ಶಯನೋತ್ಸವ ನಡೆಯಿತು.
ದೇವಾಲಯದ ಧರ್ಮಾಧಿಕಾರಿ ಶ್ರೀಧರ್ ಶರ್ಮ ಗುರೂಜಿ ನೇತೃತ್ವ ವಹಿಸಿದ್ದರು.