ಸಿದ್ದಿಪೇಟ್: ಪೋಷಕರು BMW ಕಾರು ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ ಮಾಡಿರುವ ಘಟನೆ ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯ ಜಗದೇವಪುರ ಮಂಡಲದ ಚಟ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು 21 ವರ್ಷದ ಜಾನಿ ಎಂದು ಗುರುತಿಸಲಾಗಿದೆ.
ಚಟ್ಲಪಲ್ಲಿ ಗ್ರಾಮದಲ್ಲಿ 10ನೇ ತರಗತಿಯವರೆಗೆ ಓದಿದ್ದು, ಪೋಷಕರೊಂದಿಗೆ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ಬೊಮ್ಮ ಕನಕಯ್ಯ ಮತ್ತು ಕನಕಮ್ಮ ದಂಪತಿಯ ಪುತ್ರ ಜಾನಿ, BMW ಕಾರು ಕೊಡಿಸುವಂತೆ ಪೋಷಕರ ಬೆನ್ನು ಬಿದ್ದಿದ್ದಾನೆ
ಆದರೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿ ಜೀವನ ನಡೆಸುವ ನಾವು BMW ಕಾರು ಇರಲಿ ಸ್ವಿಫ್ಟ್ ಡಿಜೈರ್ ಕಾರು ಖರೀದಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಇದರಿಂದ ತೀವ್ರ ಅಸಮಾಧಾನಗೊಂಡ ಜಾನಿ, ಜಮೀನಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ವರದಿಯಾಗಿದೆ.