ಮೆಕ್ಸಿಕೋ: ಇತ್ತೀಚಿನ ದಿನಗಳಲ್ಲಿ ಕೆಲ ಖಾಸಗಿ ನ್ಯೂಸ್ ಚಾನೆಲ್‌ಗಳ (Private news channel) ವರ್ತನೆ ಪದೇ ಪದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ತಮ್ಮ ಟಿಆರ್ಪಿಗಾಗಿ ಯಾರ ಕುಟುಂಬ, ಯಾರ ಘನತೆ, ಯಾರ ಜೀವವನ್ನಾದರೂ ಬಲಿ ಪಡೆಯುತ್ತವೆ ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕರು ಕೆಲ ಖಾಸಗಿ ನ್ಯೂಸ್ ಚಾನೆಲ್ ಗಳ ವರ್ತನೆ ವಿರುದ್ಧ ಬೇಸತ್ತು ಹೋಗಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ ಮೆಕ್ಸಿಕೋದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಸ್ತೆಗಳ ಮೇಲೆಲ್ಲಾ ನೀರು ತುಂಬಿದೆ.
ಈ ಕುರಿತು ಖಾಸಗಿ ಚಾನೆಲ್ ಲೈವ್ ಕವರೇಜ್ ವೇಳೆ ಬೈಕ್ ಸವಾರನೋರ್ವ ರಸ್ತೆ ಮಧ್ಯದಲ್ಲಿದ್ದ ದೊಡ್ಡ ಗುಂಡಿಗೆ ಬಿದ್ದಿದ್ದಾನೆ. ಆ ವಿಡಿಯೋ ಲೈವ್‌ನಲ್ಲಿ ಸೆರೆಯಾಗಿದೆ.
ಸದ್ಯ ಸವಾರ ಹಾಗೂ ಬೈಕ್‌ನ್ನು ರಕ್ಷಿಸಲಾಗಿದ್ದು, ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
फील्ड जीरो ग्राउंड रिपोर्टिंग करते हुए कभी कभी ऐसे दृश्य भी कैमरे में कैप्चर हो जाते हैं
— Osama Razvi, اسامہ ریزوی (@razvi_osama) June 16, 2025
The Rain is Very Heavy Here in #Mexico_City
Another One is Gone @DrKomalGautam @MohdKaleem98726 @Aazad45998220 @alijournalist77 @akram117080 @Sharwar390152 @SheikhS1163 @RamSinghyadavv pic.twitter.com/tDQyZbzEzo
ಈ ವೇಳೆ ಬೈಕ್ ಸವಾರ ಗುಂಡಿಯಲ್ಲಿ ಬಿದ್ದು ಮುಳುಗಿಹೋದರೂ ನ್ಯೂಸ್ ಚಾನೆಲ್ ಪತ್ರಕರ್ತೆ ಹಾಗೂ ಕ್ಯಾಮೆರಾಮನ್ ತಮ್ಮ ಪಾಡಿಗೆ ತಾವು ಸುದ್ದಿ ನೀಡಿದ್ದು, (Another one is gone) ಮತ್ತೊಬ್ಬ ಸತ್ತ ಎಂಬಂತೆ ಮಾತನಾಡಿರುವುದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆದರೆ ಇದು ವಾಸ್ತವವಲ್ಲ, AI ಜನರೇಟೇಡ್ ವಿಡಿಯೋ ಆಗಿದೆ ಎಂದು ಇತರೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.