ನವದೆಹಲಿ: ಸ್ವಿಸ್ ಬ್ಯಾಂಕ್‌ಗಳಲ್ಲಿ (Swiss banks) ಠೇವಣಿ ಇಡಲಾದ ಭಾರತೀಯ ಹಣ 2024 ರಲ್ಲಿ ಮೂರು ಪಟ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.
ವರದಿ ಅನ್ವಯ ಸುಮಾರು CHF 346 ಮಿಲಿಯನ್ (ಸುಮಾರು ರೂ. 3,675 ಕೋಟಿ) ತಲುಪಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ಜೂನ್ 19 ರಂದು ಬಹಿರಂಗಪಡಿಸಿದೆ.
ಹೆಚ್ಚಿನ ಹೆಚ್ಚಳವು ವೈಯಕ್ತಿಕ ಗ್ರಾಹಕರ ಖಾತೆಗಳಿಂದಲ್ಲ ಬದಲಿಗೆ ಬ್ಯಾಂಕ್ ಚಾನೆಲ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ನಡೆದ ನಿಧಿಯಿಂದ ಬಂದಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಗ್ರಾಹಕರಿಂದ ನೇರವಾಗಿ ಠೇವಣಿಗಳು ಸಾಧಾರಣವಾಗಿ ಏರಿದ್ದು 11% ರಷ್ಟು ಹೆಚ್ಚಾಗಿ 346 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (ಸುಮಾರು 3,675 ಕೋಟಿ ರೂ) ಏರಿಕೆಯಾಗಿದೆ.
ಈ ಠೇವಣಿಗಳು ಒಟ್ಟು ಭಾರತೀಯ ಸಂಬಂಧಿತ ನಿಧಿಗಳಲ್ಲಿ ಕೇವಲ ಹತ್ತನೇ ಒಂದು ಭಾಗವಾಗಿದೆ.
ಎಸ್‌ಎನ್‌ಬಿ ಪ್ರಕಾರ, ಈ ಅಂಕಿಅಂಶಗಳು ಬ್ಯಾಂಕ್‌ಗಳು ಅಧಿಕೃತವಾಗಿ ವರದಿ ಮಾಡಿರುವಂತದ್ದು ಮತ್ತು ಇದು ಕಪ್ಪು ಹಣವನ್ನು ಪ್ರತಿಬಿಂಬಿಸುವುದಿಲ್ಲ. ಮೂರನೇ ದೇಶಗಳ ಸಂಸ್ಥೆಗಳ ಮೂಲಕ ಭಾರತೀಯರು ಇಟ್ಟಿರುವ ಹಣ ಇದರಲ್ಲಿ ಸೇರಿಲ್ಲ.
ಸ್ವಿಸ್ ಅಧಿಕಾರಿಗಳು ಭಾರತೀಯರು ಸ್ವಿಟ್ಟರ್‌ಲ್ಯಾಂಡ್‌ನಲ್ಲಿ ಇಟ್ಟಿರುವ ಹಣವನ್ನು ಕಪ್ಪು ಹಣ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
2023ರಲ್ಲಿ 70% ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. 2023ರಲ್ಲಿ ಭಾರತೀಯರ ಹಣ 70% ಕುಸಿದು 1.04 ಬಿಲಿಯನ್ ಸ್ವಿಸ್ ಫ್ರಾಂಕ್ ಆಗಿತ್ತು. ಹೀಗಾಗಿ 2024ರ ಏರಿಕೆ ಗಮನಾರ್ಹ ಎನಿಸಿಕೊಂಡಿದೆ.