ರಾಯಚೂರು; ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ (Snake bite) ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗದ ಹೇರುಂಡಿ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ಸುಬ್ಬಮ್ಮ (35 ವರ್ಷ) ಅವರ ಮಗ ಬಸವರಾಜ (10 ವರ್ಷ) ಎಂದು ಗುರುತಿಸಲಾಗಿದೆ.
ಸುಬ್ಬಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದು, ಬಸವರಾಜ್ ಹಾಗೂ ತಾಯಿ ಒಂದು ಕಡೆ ಮಲಗಿದ್ದರೆ, ತಂದೆ ಹಾಗೂ ಮತ್ತೋರ್ವ ಮಗ ಬೇರೆಡೆ ಮಲಗಿದ್ದರು.
ಈ ವೇಳೆ ಹಾವೊಂದು ಕಚ್ಚಿದ್ದು, ಪರಿಣಾಮ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)