ವೈರಲ್ ನ್ಯೂಸ್ (Viral News): ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವವರಿಗೆ ಕಡಿಮೆ ಏನಿಲ್ಲ. ಅದರಲ್ಲಿಯೂ ಗಂಡ ಹೆಂಡತಿ ನಡುವಿನ ಹಾಸ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತದೆ.
ಈ ರೀಲ್ಸ್ ಹುಚ್ಚ ಯುವಕರಿಂದ ವೃದ್ಧರಿಗೂ ಅಂಟಿಕೊಂಡುಬಿಟ್ಟಿದೆ. ಇದು ಕೆಲವೊಮ್ಮೆ ಅತೀರೇಖಕ್ಕೆ ಕಾರಣವಾಗಿದ್ದರು, ಮತ್ತೊಂದೆಡೆ ಜಾಹೀರಾತು ಮೂಲಕ ದಂಪತಿಗಳು ಸಾವಿರಾರುಗಳಿಸುತ್ತಿದ್ದಾರೆ.
ಅನೇಕ ವಿಡಿಯೋಗಳು ಕೇವಲ ಗೃಹಿಣಿಯರೇ ಸ್ವಯಂ ಅನೇಕ ಪ್ರಯಾಸ ಪಟ್ಟು ಮಾಡಿಕೊಂಡಿಕೊಂಡರೆ, ಮತ್ತೆ ಕೆಲವಕ್ಕೆ ಅವರ ಗಂಡಂದಿರು ಸಾಥ್ ನೀಡುತ್ತಾರೆ.
ಈಗ ವಿಷಯ ಏನಪ್ಪಾ ಅಂದ್ರೆ, ಈ ಮುಂಚೆ ಹೇಳಿದಂತೆ ರೀಲ್ಸ್ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗುತ್ತಿದೆ.
ಹೌದು ಈ ವಿಡಿಯೋದಲ್ಲಿ ಮಳೆ ಬರುವ ವೇಳೆ ರಸ್ತೆಯಲ್ಲಿ ಹೆಂಡತಿ ಅನಾರಿ ಚಿತ್ರದ ಕ್ಯಾ ಮೋಸಂ ಆಯಾ ಹೇ ಗೀತೆಗೆ ಡ್ಯಾನ್ಸ್ ಮಾಡುತ್ತಿದ್ದರೆ, ಆಕೆಯ ಗಂಡ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಾರೆ.
ಇದನ್ನು ದಾರಿ ಹೋಕರೋರ್ವರು ಸೆಪ್ಟೆಂಬರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ ಇವರು ಅದ್ಭುತ ದಂಪತಿಗಳು, ಇಂತಹ ಸಂಬಂಧಗಳಲ್ಲಿ ಎಂದಿಗೂ ಬಿರುಕು ಇರುವುದಿಲ್ಲ, ಇವರ ಪ್ರೀತಿ ಜೀವನಪರ್ಯಂತ ಇರುತ್ತದೆ.
ಗಂಡ ಹೆಂಡತಿಯೊಂದಿಗೆ ಅದ್ಭುತವಾದ ಜೀವನವನ್ನು ಹೇಗೆ ನಡೆಸಬೇಕೆಂದು ಹೇಳಲು ಈ ವಿಡಿಯೋ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಕೆಲವರು ಹೌದು, ಅವನು ತನ್ನ ಹೆಂಡತಿಯನ್ನು ರಸ್ತೆಯಲ್ಲಿ ನೃತ್ಯ ಮಾಡುವಂತೆ ಮಾಡುತ್ತಿದ್ದಾನೆ, ಇಂತಹ ಜನರು ನಾಚಿಕೆಪಡಬೇಕು. ಕನಿಷ್ಠ ನೀವು ನಿಮ್ಮ ಹೆತ್ತವರ ಬಗ್ಗೆ ಯೋಚಿಸಬೇಕು. ನಿಮ್ಮ ಹೆತ್ತವರು ಈ ಗೌರವವನ್ನು ಹಲವು ವರ್ಷಗಳಿಂದ ಕಾಪಾಡಿದ್ದರು ಮತ್ತು ನೀವು ಅದನ್ನು ಒಂದು ಕ್ಷಣದಲ್ಲಿ ರಸ್ತೆಗೆ ತಂದಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ಈ ವಿಡಿಯೋ ಎಲ್ಲಿಯದೂ ಎಂದು ತಿಳಿದುಬಂದಿಲ್ಲ.