ಹುಬ್ಬಳ್ಳಿ: ಮೋದಿ (Modi) ನೇತೃತ್ವದ ಕೇಂದ್ರ ಸರ್ಕಾರದ ಫಾರಿನ್ ಪಾಲಿಸಿ ಫೇಲ್ ಆಗಿರುವ ಕಾರಣ ಬಿಜೆಪಿಗರು ಒಳಗೊಳಗೆ ಪ್ರಧಾನಮಂತ್ರಿ ಬದಲಾಗಬೇಕೆಂದು ಮಾತಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ (Santhosh Lad)ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ಶಾಸಕರು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳುವ ಬಿಜೆಪಿಯವರು, ಪ್ರಧಾನಿ ಮೋದಿ ಅವರನ್ನ ಬದಲಾಯಿಸುವ ಬಗ್ಗೆ ಬಿಜೆಪಿ ಸಂಸದರು ಆಗ್ರಹಿಸುತ್ತಿರುವ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಖರ್ಗೆ ಅವರು ಹೇಳಿರುವುದನ್ನ ಬಿಜೆಪಿ ಟೀಕೆ ಮಾಡುತ್ತಿದೆ, ಅವರು ಸೋನಿಯಾ ಗಾಂಧಿ ಅವರ ಮೇಲಿನ ಗೌರವಕ್ಕೆ ಹಾಗೆ ಹೇಳಿದ್ದಾರೆ. ಆದರೆ ಬಿಜೆಪಿ ಅವರು ದೇಶದಲ್ಲಿ ಸಂಭವಿಸಿದ ಉಗ್ರರ ದಾಳಿ ಬಗ್ಗೆ ಬಿಜೆಪಿ ಅವರನ್ನ ಕೇಳಿ, ಅದರ ಬಗ್ಗೆ ಚರ್ಚೆ ಮಾಡುವ ಬದಲು ಸಣ್ಣ ವಿಚಾರದ ಬಗ್ಗೆ ಟೀಕೆ ಮಾಡುತ್ತಾ, ಅಜೆಂಡಾ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುತ್ತಾ ಸಮಯ ಕಳೆಯುತ್ತಾರೆ.
ದೇಶದಲ್ಲಿ ಅನೇಕ ಸಮಸ್ಯೆಗಳು ಇದೆ ರೈತರಿಗೆ ಡಿಎಪಿ ಸಿಗುತ್ತಿಲ್ಲ, ಕಾಂಪ್ಲಿಕ್ಟ್ ಸಿಗುತ್ತಿಲ್ಲ… ಇದರ ಬಗ್ಗೆ ಚರ್ಚೆ ಆಗಬೇಕಲ್ವಾ.. ಆದರೆ ಅದರೆ ಬಿಜೆಪಿಯವರು ಇದರ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ.
ಚೈನಾ ವಸ್ತುಗಳನ್ನು ಬಹುಷ್ಕರಿಸಲು ಪ್ರಧಾನಿಗಳು ಕರೆ ನೀಡುತ್ತಾರೆ. ಮತ್ತೆ ಇಂಪೋರ್ಟ್ ಮಾಡ್ತಾ ಇರೋದ್ ಯಾರು..? ಇದರ ಬಗ್ಗೆ ಕೇಳಬೇಕಲ್ವಾ..? ಇಂಪೋರ್ಟ್ ಮಾಡೋರ್ ಇವರೇ, ಮತ್ ಇವರೇ ಬಂದು ಚೈನಾ ಪ್ರಾಡಕ್ಟ್ ಬಳಸಬೇಡಿ ಅಂತ ಹೇಳ್ತಾರೆ. ಈಗ ಯಾಕ್ ಹೇಳ್ತೀರಿ..? 11 ವರ್ಷ ಏನ್ ಮಾಡ್ತಾ ಇದ್ರೀ..? ಚೈನಾ ಅಧ್ಯಕ್ಷರ ಕರೆತಂದು ತೊಟ್ಟಲಲ್ಲಿ ತೂಗಿದ್ ಯಾರು..? ಇವತ್ ಹೇಳ್ತಾರೆ ಚೈನಾ ವಸ್ತು ತಗೋಬೇಡಿ ಅಂತ ಹೇಳ್ತಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2g ಹಗರಣ ಕಲ್ಲಿದ್ದಲು ಹಗರಣದ ಬಗ್ಗೆ ಕಳೆದ 11 ವರ್ಷದ ಅವರೇ (ಬಿಜೆಪಿ) ಅಧಿಕಾರದಲ್ಲಿ ಇದ್ದರು. ಈಗ ಅವರೇ ವರದಿ ಕೊಟ್ಟಿದ್ದಾರೆ, ಏನ್ ವರದಿ ಕೊಟ್ಟಿದ್ದಾರೆ..? ಯಾವ ರೀತಿಯ ಹಗರಣ ನಡೆದಿಲ್ಲ ಎಂದು ವರದಿ ಕೊಟ್ಟಿದ್ದಾರೆ.
ಮತ್ತೆ ದೇಶಕಂಡ ಮಹಾನ್ ಆರ್ಥಿಕ ತಜ್ಞರನ್ನ ಭಯೋತ್ಪಾದಕ ಎಂದು ಬಿಜೆಪಿ ಅವರು ಅವಹೇಳನ ಮಾಡಿದ್ದರು, ಅದರ ಬಗ್ಗೆ ಕ್ಷಮೆನೂ ಕೇಳಿಲ್ಲ. ಹಾಲಿ ಪ್ರಧಾನ ಮಂತ್ರಿ ಸಾಹೇಬರು ಕೂಡ ಮನಮೋಹನ್ ಸಿಂಗ್ ಅವರನ್ನ ಟೆರರಿಸ್ಟ್ ಎಂದಿದ್ದರು. ದಾಖಲೆ ತೆಗೆಸು ನೋಡಲಿ.
ಈಗ 11 ವರ್ಷದ ಅವಧಿಯಲ್ಲಿ ಯಾರ್ ಯಾರಿಗೆ ಎಷ್ಟು ಎಷ್ಟು ಮೈನಿಂಗ್ ಕೊಟ್ಟಿದ್ದಾರೆ, ಯಾವುದು ಎಷ್ಟು ಇಂಪೋರ್ಟ್ ಆಗಿದೆ, ಕಲ್ಲಿದ್ದಲು ಎಷ್ಟು ಇಂಪೋರ್ಟ್ ಆಗಿದೆ ಇದರ ಬಗ್ಗೆ ವರದಿ ಕೊಡ್ತಾರಾ ಕೇಳಿ ಎಂದು ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.