ಬಲರಾಂಪುರ: ಉತ್ತರ ಪ್ರದೇಶದ (Uttar Pradesh) ಬಲರಾಂಪುರದ 21 ವರ್ಷದ ವಿಶೇಷಚೇತನ ಯುವತಿಯ ಅಪಹರಿಸಿರುವ ದುಷ್ಕರ್ಮಿಗಳು ಸಾಮೂಹಿಕ ಅತ್ಯಾ*ಚಾರ (Gang rape) ಎಸಗಿ ಪರಾರಿಯಾಗಿರುವ ಘಟನೆ ನಡೆದಿದೆ.
ಬಲರಾಂಪುರದ ಸರ್ಕಾರಿ ಅಧಿಕಾರಿಗಳ ಕಚೇರಿಯಿಂದ ಕೇವಲ ಒಂದು ಕಿಮೀ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಸಂತ್ರಸ್ತ ಯುವತಿ ಸೋಮವಾರ ರಾತ್ರಿ ತನ್ನ ಮಾವನ ಮನೆಯಿಂದ ತನ್ನ ಮನೆಗೆ ನಡೆದುಕೊಂಡು ಬರುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಅಟ್ಟಾಡಿಸಿಕೊಂಡು ಬಂದಿದೆ.
ಮಾವನ ಮನೆಯಿಂದ ತನ್ನ ಮನೆಗೆ ಆಗಮಿಸುವ ವೇಳೆ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಇದರಿಂದ ಭಯಗೊಂಡ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾಳೆ.
ಆದರೆ ಈ ವೇಳೆ ದುಷ್ಕರ್ಮಿಗಳು ಆಕೆಯನ್ನು ಬೆನ್ನಟ್ಟಿ ಬಲವಂತವಾಗಿ ಬೈಕ್ ಕೂರಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾ*ಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ.
ಇತ್ತ ಮಗಳು ಇನ್ನು ಬಾರದೇ ಇರುವುದನ್ನು ಗಮನಿಸಿ ಆಕೆಯನ್ನು ಹುಡುಕಲು ಮುಂದಾಗಿದ್ದಾರೆ.
यूपी में लोग हैवान बनते जा रहा हैं, अपनी हवस को मिटाने के लिए किसी भी हद तक जा सकते हैं।
— sunil maurya (@MauryaSunil01) August 13, 2025
मामला जिला बलरामपुर का है जहां 21 साल की मूकबधिर (गूंगी) लड़की से गैंगरेप हुआ।
CCTV में लड़की भाग रही है और दरिंदे उसको बाइक दौड़ा रहे हैं। pic.twitter.com/EBPUQSKiol
ಈ ವೇಳೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯ ಬಳಿಯಿದ್ದ ಪೊದೆಯೊಂದರಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಬಟ್ಟೆಗಳು ಚಿಂದಿಯಾಗಿ ಬಿದ್ದಿದ್ದವು. ಬಳಿಕ ಆಕೆಗೆ ಪ್ರಜ್ಞೆ ಬಂದಾಗ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ನನ್ನನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಯ್ದಿಟ್ಟಿದ್ದಾರೆ.
ಸದ್ಯ ಮಹಿಳೆಯ ಮೇಲೆ ಅತ್ಯಾ*ಚಾರ ಎಸಾಗುವುದಕ್ಕೂ ಮುನ್ನ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ವಿಡಿಯೋ ಸಿಕ್ಕಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದುಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.