ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಪ್ರತಿಷ್ಠಿಸಲಾಗಿದ್ದ ನ್ಯಾಯ ಗಣಪತಿಯನ್ನು (Nyaya Ganapati) ಶುಕ್ರವಾರ ಸಂಜೆ ಸಂಭ್ರಮದಿಂದ ವಿಸರ್ಜನೆ ಮಾಡಲಾಯಿತು.
ಪ್ರತಿವರ್ಷದಂತೆ ಗಣೇಶ ಚತುರ್ಥಿಯಂದು ದೊಡ್ಡಬಳ್ಳಾಪುರ ವಕೀಲರ ಸಂಘದ ಆವರಣದಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ, ಶ್ರದ್ಧೆ ಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ಕೈಗೊಂಡು, ಮೂರನೇ ದಿನವಾದ ಶುಕ್ರವಾರ ಸಾರೋಟಿ ಮೂಲಕ, ತಮಟೆ ವಾದ್ಯದ ಸದ್ದಿನೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು.
ಬಳಿ ಡಿಕ್ರಾಸ್ ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ತೊಟ್ಟಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ಈ ವೇಳೆ ವಕೀಲರಿಂದ ಗಣಪತಿ ಬಪ್ಪ ಮೋರೆಯಾ, ಗಣಪತಿ ಮಹರಾಜ್ ಕಿ ಜೈ, ನ್ಯಾಯ ಗಣಪತಿ ಕಿ ಜೈ ಘೋಷಣೆ ಕೇಳಿ ಬಂತು.
ಈ ಕುರಿತಾದ ವಿಡಿಯೋವನ್ನು ವಕೀಲರಾದ ಎ.ಜೆ.ಮಂಜುನಾಥ್ ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ವೀಕ್ಷಣೆ ಪಡೆದಿದೆ.