ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ರೋಜಿಪುರದ ಶ್ರೀ ವಿನಾಯಕ ಸೇವಾ ಸಮಿತಿವತಿಯಿಂದ (Vinayak Seva Samiti) ಅದ್ಧೂರಿಯಾಗಿ ಗಣೇಶೋತ್ಸವದ ಜೊತೆಯಲ್ಲಿ ಸೇವಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದೆ.
ಶ್ರೀ ವಿನಾಯಕ ಸೇವಾ ಸಮಿತಿ ಗಂಗಾದರಪುರ ರೋಜಿಪುರದ ತಂಡದಿಂದ ಗಣೇಶೋತ್ಸವದ ಅಂಗವಾಗಿ ರೋಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಗಣೇಶೋತ್ಸವದ ಅಂಗವಾಗಿ ಪೆನ್, ಪೆನ್ಸಿಲ್ ಹಾಗೂ ನೋಟ್ ಬುಕ್ ವಿತರಿಸಿದ್ದಾರೆ.
ಈ ವೇಳೆ ನಗರಸಭೆ ಸದಸ್ಯರಾದ ರಜನಿಸುಬ್ರಮಣಿ, ದಿಲೀಪಗೌಡ, ನವೀನ್, ರಾಕೇಶ್ ಗೌಡ, ಹೇಮಂತ್, ರಾಜು ಮತ್ತಿತರರಿದ್ದರು.