ದೊಡ್ಡಬಳ್ಳಾಪುರ: ಇಂದು ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಆದರ್ಶ ಶಿಕ್ಷಕರಾಗಿಯೂ ಹೆಸರುವಾಸಿಯಾಗಿದ್ದ ಅವರ ಜನ್ಮದಿನವಾದ ಸೆ.5ನ್ನು ಪ್ರತೀ ವರ್ಷವೂ ಶಿಕ್ಷಕರ (Teachers) ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಮೇಷ್ಟ್ರಾದ ಪೊಲೀಸರು
ದೊಡ್ಡಬಳ್ಳಾಪುರ ನಗರದ ಮಹಿಳಾ ಪೊಲೀಸ್ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸರ್ಕಾರಿ ಪಿಯು ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಪೊಲೀಸರು ಮೇಷ್ಟ್ರಾಗಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಈ ಮುಂಚೆ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು, ಮಕ್ಕಳ ಹಕ್ಕುಗಳು, ಬದುಕು, ರಕ್ಷಣೆ, ವಿಕಾಸ ಮತ್ತು ಭಾಗಹಿಸುವ ಹಕ್ಕುಗಳು, ಮಕ್ಕಳ ಹಕ್ಕುಗಳ ಹತ್ತು ವಿಭಾಗಗಳು, ಮಕ್ಕಳ ಹಕ್ಕುಗಳ ಜೊತೆ ಕೆಲವು ಕರ್ತವ್ಯಗಳೂ, ಶಾಲೆ, ಶಿಕ್ಷಣ ಹಕ್ಕುಗಳ ಕುರಿತು ವಿವರಿಸಿದರು.
ಇದೇ ವೇಳೆ ಶಾಲಾ ಮಕ್ಕಳ ಹಕ್ಕುಗಳ ಸಂಘದ ರಚನೆ ಮತ್ತು ನಿರ್ವಹಣೆ, ಮಕ್ಕಳ ಹಕ್ಕುಗಳ ಸಂಘ ಕುರಿತು ನಿರ್ದೇಶಿಸಿರುವ ಶಿಕ್ಷಣ ಇಲಾಖೆಯ ಸುತ್ತೋಲೆ, ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ, ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸುವುದು, ಮಕ್ಕಳ ಹಕ್ಕುಗಳ ಪ್ರತಿನಿಧಿ ಆಯ್ಕೆ ಮಾಡುವುದು ಸೇರಿದಂತೆ POSH ಕಮಿಟಿಯ ನಿರ್ವಹಣೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ, ಅಪೌಷ್ಟಿಕತೆ ನಿವಾರಣೆಗೆ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸಿದರು ಸೂಚಿಸಿದರು.
ಈ ವೇಳೆ ತನಿಖಾ ಸಹಾಯಕ ಮಹೇಶ್, ಮಹಿಳಾ ಸಿಬ್ಬಂದಿಯಾದ ಅನ್ನಪೂರ್ಣ ಮತ್ತಿತರರಿದ್ದರು.